Sunday, June 29, 2025
spot_imgspot_img
spot_imgspot_img

ಇಂದಿನಿಂದ ಹಾಲು, ವಿದ್ಯುತ್ ದರ ಏರಿಕೆ..!

- Advertisement -
- Advertisement -

ಬೆಂಗಳೂರು: ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳ ಅಥವಾ ಸೇವೆಗಳ ದರ ಇಂದಿನಿಂದ ಹೆಚ್ಚಳವಾಗಲಿದೆ. ಜೊತೆಗೆ ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ.

ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯಾಗಿದೆ. ನಂದಿನಿಯ ಎಲ್ಲಾ ಬ್ರ್ಯಾಂಡ್ ನ ಹಾಲಿನ ದರ 4 ರೂ. ಏರಿಕೆಯಾಗಲಿದೆ. ಮೊಸರಿನ ದರವು 4ರೂ. ಹೆಚ್ಚಾಗಲಿದೆ. ಈ ಪರಿಷ್ಕೃತ ದರವು ಇಂದಿನಿಂದ ಜಾರಿಗೆ ಬರಲಿದೆ.

ಇಂದಿನಿಂದ ಪ್ರತಿ ಯೂನಿಟ್‌ಗೆ 36 ಪೈಸೆ ವಿದ್ಯುತ್ ದರ ಹೆಚ್ಚಳವಾಗಿದೆ. ಇದರ ಜೊತೆಗೆ ಮಾಸಿಕ ಶುಲ್ಕವೂ 20 ರೂಪಾಯಿ ಹೆಚ್ಚಳವಾಗುತ್ತಿದೆ. ಇದರಿಂದ 120 ರೂಪಾಯಿ ಇದ್ದ ನಿಗದಿತ ಶುಲ್ಕ, 140 ರೂಪಾಯಿಗೆ ಏರಿಕೆಯಾಗಲಿದೆ.

ಹಾಲು, ವಿದ್ಯುತ್ ಜೊತೆ ಬೆಂಗಳೂರಿನ ಜನರು ಇಂದಿನಿಂದ ಕಸ ನಿರ್ವಹಣೆಗೆ ವೆಚ್ಚ ಭರಿಸಬೇಕಾಗುತ್ತದೆ. ಕಟ್ಟಡಗಳ ವಿಸ್ತೀರ್ಣವನ್ನು ಆಧರಿಸಿ 10 ರೂ. ಇಂದ 400ರೂ. ವರೆಗೂ ಕಸ ನಿರ್ವಹಣೆ ವೆಚ್ಚವನ್ನು ಬಿಬಿಎಂಪಿಗೆ ಕೊಡಬೇಕಾಗುತ್ತದೆ. ಇದು ಬೆಂಗಳೂರು ಪ್ರತಿ ಮನೆ, ಅಂಗಡಿ ಕಚೇರಿಗಳಿಗೂ ಅನ್ವಯವಾಗಲಿದೆ.

- Advertisement -

Related news

error: Content is protected !!