Wednesday, August 5, 2026
spot_imgspot_img
spot_imgspot_img

ಉಳ್ಳಾಲ: ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ನಾಲ್ವರು ಮಹಿಳೆಯರ ರಕ್ಷಣೆ

- Advertisement -
- Advertisement -

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಉಳ್ಳಾಲದ ಸಮುದ್ರ ತೀರಕ್ಕೆ ವಾಯು ವಿಹಾರಕ್ಕೆಂದು ತೆರಳಿದ್ದ ಐವರು ಮಹಿಳೆಯರ ಪೈಕಿ ನಾಲ್ವರು ಮಹಿಳೆಯರು ಸಮುದ್ರ ಪಾಲಾಗಿದ್ದು, ಸ್ಥಳೀಯ ಈಜುಗಾರರು ರಕ್ಷಿಸಿದ ಘಟನೆ ಇಂದು ನಡೆದಿದೆ.ಬೆಂಗಳೂರಿನ ಹಳ್ಳಿಯ ಸವಿತಾ(38), ಸೌಮ್ಯ(39), ಬಿಂದು(20), ಪದ್ಮಿನಿ(38) ಮತ್ತು ಮಂಜುಳ(35) ಎಂಬ ಐವರು ಮಹಿಳೆಯರು ಇಮದು ಬೆಳಿಗ್ಗೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ಮಧ್ಯಾಹ್ನ ವೇಳೆ ಉಳ್ಳಾಲ ಬೀಚ್‌ಗೆ ತೆರಳಿದ್ದರು.

ಈ ಐವರು ಯುವತಿಯರು ಸಮುದ್ರ ತೀರದಲ್ಲಿ ಕುಳಿತ್ತಿದ್ದ ವೇಳೆ ಬೃಹತ್ ಗಾತ್ರದ ಅಲೆಯೊಂದು ತೀರಕ್ಕೆ ಅಪ್ಪಳಿಸಿದೆ. ಪರಿಣಾಮ ಸವಿತಾ, ಸೌಮ್ಯ, ಬಿಂದು, ಪದ್ಮಿನಿ ನೀರು ಪಾಲಾಗಿದ್ದಾರೆ. ಕೂಡಲೇ ಸ್ಥಳೀಯ ಈಜುಗಾರರು ನಾಲ್ವರು ಯುವತಿಯರನ್ನ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಿಸಲಾದ ಮಹಿಳೆಯರ ಪೈಕಿ ಪದ್ಮಿನಿ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಳಿದವರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!