Saturday, July 25, 2026
spot_imgspot_img
spot_imgspot_img

ಬಂಟ್ವಾಳ: ಅಂಗಡಿ ಬೀಗ ಮುರಿದು ಕಳ್ಳತನ

- Advertisement -
- Advertisement -

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಪರಂಗಿಪೇಟೆಯಲ್ಲಿರುವ ವಿಶ್ವಾಸ ಸಿಟಿ ಸೆಂಟರ್ ನ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ ದಿನಾಂಕ ಏ. 11ರಂದು ರಾತ್ರಿ ಕಳ್ಳರು ಅಂಗಡಿಯ ಶಟರ್ ಗೆ ಅಳವಡಿಸಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿದ್ದ ನಗದನ್ನು ಕಳವುಗೈದ ಘಟನೆ ನಡೆದಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 42/2025 ಕಲಂ: 331(4) 305 ಬಿ.ಎನ್‌. ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.ಪ್ರಕರಣದ ತನಿಖೆ ನಡೆಸಲಾಗಿ ಆರೋಪಿಯಾದ ನಝೀರ್‌ ಮಹಮ್ಮದ್‌ (26) ಕಣ್ಣೂರು, ಅಡ್ಯಾರು ಗ್ರಾಮ, ಮಂಗಳೂರು ತಾಲೂಕು ಎಂಬಾತನನ್ನು ದಿನಾಂಕ:19-04-2025ರಂದು ದಸ್ತಗಿರಿ ಮಾಡಿ, ಆತನಿಂದ ಕಳವುಗೈದ ನಗದಿನ ಪೈಕಿ ರೂ.1,09,490/-ನಗದು ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್‌ ಸೈಕಲ್‌ ನ್ನು ಸ್ವಾಧೀನಪಡಿಸಲಾಗಿದೆ.

ಆರೋಪಿ ನಝೀರ್‌ ಮಹಮ್ಮದ್‌ ಎಂಬಾತನು ಈಗಾಗಲೇ 2024ನೇ ವರ್ಷದಲ್ಲಿ ಕಂಕನಾಡಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಗಳೂರು,ಕಣ್ಣೂರು ಟಿ.ವಿ.ಎಸ್‌ ಶೊರೂಮ್‌ ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿರುತ್ತಾನೆ. ಪ್ರಕರಣದ‌ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ‌ ಗ್ರಾಮಾಂತರ ಪೊಲೀಸ್‌ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ.ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿರುತ್ತಾರೆ.

- Advertisement -

Related news

error: Content is protected !!