Saturday, June 28, 2025
spot_imgspot_img
spot_imgspot_img

ಕೆಟ್ಟು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನ..!

- Advertisement -
- Advertisement -

ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲ್ಲರ್ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಅಂದಹಾಗೆ ಇಂಜಿನ್ ರಿಪೇರಿ ಸಮಸ್ಯೆಯಿಂದ ಏರ್‌ಪೋರ್ಟ್‌ ಒಳಭಾಗದ ಅಲ್ಪಾ ಪಾರ್ಕಿಂಗ್ ಬೇ-71 ರಲ್ಲಿ ಹಲವು ದಿನಗಳಿಂದ ವಿಮಾನವನ್ನ ನಿಲ್ಲಿಸಲಾಗಿತ್ತು. ಇದೇ ವಿಮಾನಕ್ಕೆ ಮುಂಭಾಗದ ಮೂತಿ ಬಳಿ ಟೆಂಪೋ ಟ್ರಾವೆಲ್ಲರ್ ಡಿಕ್ಕಿಯಾಗಿದೆ.

ಘಟನೆಯಲ್ಲಿ ಟೆಂಪೋ ಟ್ರಾವೆಲ್ಲರ್ ವಿಮಾನದ ಮೂತಿ ಭಾಗದ ಕೆಳಗೆ ಸಿಲುಕಿಕೊಂಡು ಟಿಟಿಯ ಟಾಪ್ ಜಖಂ ಆಗಿದೆ. ಘಟನೆಯಲ್ಲಿ ಚಾಲಕನ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ರನ್ ವೇಗೆ ಸಿಬ್ಬಂದಿಯನ್ನು ಬಿಟ್ಟು ಬರಬೇಕಾದರೆ ಟಿಟಿ ವಾಹನ ಅಪಘಾತಕ್ಕೀಡಾಗಿದೆ.

- Advertisement -

Related news

error: Content is protected !!