Monday, April 29, 2024
spot_imgspot_img
spot_imgspot_img

ಕಂಬಳಬೆಟ್ಟು: ಗ್ರಾಮ ವಿಕಾಸ ಸಮಿತಿ ಇಡ್ಕಿದು ಮತ್ತು ಶ್ರೀ ಜಯದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಧರ್ಮನಗರ ಇದರ ಸಹಯೋಗದೊಂದಿಗೆ ಚಿಣ್ಣರಿಗಾಗಿ ಚೈತ್ರ ಶಿಬಿರ

- Advertisement -G L Acharya panikkar
- Advertisement -

ಕಂಬಳಬೆಟ್ಟು: ಗ್ರಾಮ ವಿಕಾಸ ಸಮಿತಿ ಇಡ್ಕಿದು..ಮತ್ತು ಜಯದುರ್ಗಾ ಪರಮೇಶ್ವರಿ ಭಜನಾ ಸಮಿತಿ ಧರ್ಮನಗರ ಇದರ ಸಹಯೋಗದೊಂದಿಗೆ 1 ರಿಂದ 8 ನೆ ತರಗತಿಯ ಮಕ್ಕಳಿಗೆ ಚೈತ್ರಾ ಶಿಬಿರ ಧರ್ಮನಗರ ಸಮಾಜ ಮಂದಿರದಲ್ಲಿ ಇಂದು ಬೆಳಿಗ್ಗೆ 9.30.ಕ್ಕೆ ಉದ್ಘಾಟನೆ ಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀದೇವಿ ನಾಗರಾಜ್ ಭಟ್ ಸುಳ್ಯ ಇವರು ದೀಪ ಬೆಳಗಿಸಿ ತರಕಾರಿ ಸಸಿಯನ್ನು ಮಕ್ಕಳ ಜೊತೆಯಲ್ಲಿ ನೆಡುವುದರ ಮುಖಾಂತರ ಉದ್ಘಾಟಿಸಿದರು. ಬಂದಂತಹ ಎಲ್ಲಾ ಮಕ್ಕಳಿಂದ ಸಸಿಯನ್ನು ನೆಡಿಸುವುದರ ಮೂಲಕ..ಮಕ್ಕಳಿಗೆ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.


ಮಕ್ಕಳು ಸಾಮೂಹಿಕವಾಗಿ ಪ್ರಾರ್ಥನೆ ಹಾಡಿದರು..ವೇದಿಕೆಯಲ್ಲಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಬ್ರಮಣ್ಯ ಭಟ್ ಉರಿಮಜಲು, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಮುಕ್ಕುಡ, ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಹಕಾರ್ಯವಾಹರದ ಚೇತನ್‌ ಕಡೇಶಿವಾಲಯ ಇವರು ಉಪಸ್ಥಿತರಿದ್ದರು..

ನವೀನ ಮುಡೈಮಾರು ಕಾರ್ಯಕ್ರಮವನ್ನು ನಿರೂಪಿಸಿದರು..ಈಶ್ವರ್ ಕುಲಾಲ್ ರಾಮನಗರ ಅತಿಥಿಗಳನ್ನು ಸ್ವಾಗತಿಸುತ್ತಾ ಪರಿಚಯಿಸಿದರು..ಅಂಬಿಕಾ ವಿದ್ಯಾಲಯದ ದೈಹಿಕ ಶಿಕ್ಷಕಿ ಸುಚಿತ್ರಾ ಉರಿಮಜಲು ಇವರನ್ನು ಶಿಬಿರಧಿಕಾರಿಯಾಗಿ ಘೋಷಣೆ ಮಾಡಲಾಯಿತು..ವಂದನಾರ್ಪಣೆಯನ್ನು ಶಿಬಿರಾಧಿಕಾರಿ ನೆರವೇರಿಸಿದರು..100.ಕ್ಕಿಂತ ಹೆಚ್ಚು ಮಕ್ಕಳು ಶಿಬಿರದಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡರು..


ಈ ಶಿಬಿರವು ಏಪ್ರಿಲ್ 14 ನೇ ಭಾನುವಾರ ಸಮಾರೋಪ ಗೊಳ್ಳಲಿದೆ.. ಒಂದು ವಾರಗಳ ಕಾಲ ಬೆಳಿಗ್ಗೆ 9.ರಿಂದ ಸಂಜೆ 4 ರವರೆಗೆ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ..ಮತ್ತು ಮಕ್ಕಳು ತಾವು ಕಲಿತ ಚಟುವಟಿಕೆ ಕೆಗಳನ್ನು. ಸಮಾರೋಪದ ದಿನ ಪ್ರದರ್ಶನ ಮಾಡಲಿದ್ದಾರೆ..ಮತ್ತು ಸಮಾರೋಪದ ದಿನ ದೀಪಪೂಜನ ಕಾರ್ಯಕ್ರಮವು ನಡೆಯಲಿದೆ..ಸಮಾರೋಪದ ದಿನ ಶಿಬಿರದ ಮಕ್ಕಳ ತಂದೆ ತಾಯಿ ಅಗತ್ಯವಾಗಿ ಉಪಸ್ಥಿತರಿರಬೇಕು.ಮತ್ತು ಊರಿನ ಬಂಧುಗಳು ಭಾಗವಹಿಸಬೇಕು ಎಂದು ತಿಳಿಸಿದ್ದಾರೆ..

- Advertisement -

Related news

error: Content is protected !!