Tuesday, September 8, 2026
spot_imgspot_img
spot_imgspot_img

ಬಾಬಾ ರಾಮದೇವ್ ‘ಶರಬತ್ ಜಿಹಾದ್’ ಹೇಳಿಕೆ: ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್

- Advertisement -
- Advertisement -

ಯೋಗ ಗುರು ಬಾಬಾರಾಮದೇವ್ ಅವರು ಇತ್ತೀಚೆಗೆ ಹಮ್‌ದರ್ದ್ ಅವರ ಪಾನೀಯದ ಕುರಿತು ‘ಶರಬತ್ ಜಿಹಾದ್’ ಎಂದು ಹೇಳಿದ್ದರ ಬಗ್ಗೆ ದೆಹಲಿ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದ್ದು, ‘ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ’ ಎಂದು ತಿಳಿಸಿದೆ.ಹಮ್‌ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ‘ಬಾಬಾ ರಾಮ್‌ದೇವ್ ಅವರ ಹೇಳಿಕೆ ಅಸಮರ್ಥನೀಯವಾಗಿದೆ. ನಿಮ್ಮ ಕಕ್ಷಿದಾರರಿಗೆ ಹೇಳಿಕೆ ಬಗ್ಗೆ ಗಮನವಿಟ್ಟುಕೊಳ್ಳಲು ಹೇಳಿ, ಇಲ್ಲದಿದ್ದರೆ ಬಲವಾದ ಆದೇಶ ಬರುತ್ತದೆ’ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಪತಂಜಲಿ ಗುಲಾಬ್ ಶರಬತ್ ಪ್ರಚಾರದ ವೇಳೆ, ಹಮ್‌ದರ್ದ್ ಅವರು ರೂಹ್ ಅಫ್ಯಾದಿಂದ (ಶರಬತ್) ಗಳಿಸಿದ ಹಣ ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಕೆಯಾಗಿದೆ ಎಂದು ರಾಮ್‌ದೇವ್ ಹೇಳಿಕೆ ನೀಡಿದ್ದರು. ಇದಾದ ಬಳಿಕ ನಾನು ಯಾವುದೇ ಬ್ರಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಲ್ಲ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು.ಹಮ್‌ದರ್ದ್ ಪರ ವಿಚಾರಣೆಗೆ ಹಾಜರಾದ ವಕೀಲರು, ಇದು ಸಮುದಾಯದ ನಡುವೆ ಬಿರುಕು ಸೃಷ್ಟಿಸುವ ಪ್ರಕರಣವಾಗಿದೆ. ದ್ವೇಷ ಭಾಷಣವಾಗಿದೆ. ರಾಮ್‌ದೇವ್ ಅವರು ಇದು ಶರಬತ್ ಜಿಹಾದ್ ಎಂದು ಹೇಳಿದ್ದರು. ಅವರು ಅವರ ಉದ್ಯಮ ನೋಡಿಕೊಳ್ಳಲಿ, ನಮಗೇಕೆ ತೊಂದರೆ ಕೊಡುತ್ತಿದ್ದಾರೆ ಎಂದು ವಾದ ಮಂಡಿಸಿದರು.

- Advertisement -

Related news

error: Content is protected !!