Wednesday, April 24, 2024
spot_imgspot_img
spot_imgspot_img

‘ವೈದ್ಯ’ರ ಕೈಗೆ ಆರೋಗ್ಯ ಇಲಾಖೆ!!

- Advertisement -G L Acharya panikkar
- Advertisement -

ಬೆಂಗಳೂರು : ಎರಡು ಕ್ಷೇತ್ರಗಳ ಉಪಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಕೆಲವು ಸಚಿವರ ಖಾತೆ ಬದಲಾವಣೆಗೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.


ಸಚಿವ ಬಿ.ಶ್ರೀರಾಮುಲು ಅವರ ಬಳಿಯಿರುವ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ವಹಿಸಲು ತೀರ್ಮಾನವಾಗಿದೆ. ಹಾಗೆಯೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಬಳಿಯಿರುವ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಮೂಲಗಳು ತಿಳಿಸಿವೆ.

ಕೋವಿಡ್- 19 ನಿಯಂತ್ರಣ, ನಿರ್ವಹಣೆ ಹೊಣೆಗಾರಿಕೆಯಲ್ಲಿ ಸಮನ್ವಯದ ಕೊರತೆ, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣದ ಜತೆಗೆ ಆರೋಗ್ಯ ಖಾತೆ ಜವಾಬ್ದಾರಿಯನ್ನೂ ವಹಿಸಿ ಸುಗಮ ವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಉದ್ದೇಶದಿಂದ ಸಂಪುಟ ಕಸರತ್ತಿಗೂ ಮೊದಲೇ ಆಯ್ದ ಸಚಿವರ ಖಾತೆ ಬದಲಾವಣೆಗೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ತಿಳಿಸಿವೆ.


ಕೊರೋನಾ ನಿರ್ವಹಣೆಯಲ್ಲಿ ಸಂವಹನ ಕೊರತೆ ಇದೆ ಎಂಬ ದೂರುಗಳು ಕೇಳಿಬರುತ್ತಿದ್ದು ಹೀಗಾಗಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಒಬ್ಬರಿಗೆ ನೀಡಲು ನಿರ್ಧರಿಸಲಾಗಿದೆ. ಇನ್ನು ಸುಧಾಕರ್ ಅವರು ವೈದ್ಯರೂ ಆಗಿರುವುದರಿಂದ ಎರಡು ಖಾತೆಯನ್ನು ಸುಧಾಕರ್ ಅವರಿಗೆ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

- Advertisement -

Related news

error: Content is protected !!