Wednesday, September 9, 2026
spot_imgspot_img
spot_imgspot_img

ಪುತ್ತೂರು: ವೈದ್ಯಾಧಿಕಾರಿ ಆಶಾ ಪುತ್ತೂರಾಯ ಹಲ್ಲೆ ಯತ್ನ ಪ್ರಕರಣ-ಇಬ್ಬರ ವಿರುದ್ಧ ದೂರು ದಾಖಲು

- Advertisement -
- Advertisement -

ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾ ಜ್ಯೋತಿ ಕೆ ಎಂಬವರ ಮೇಲೆ ಅನುಚಿತವಾಗಿ ಹಲ್ಲೆಗೆ ಯತ್ನಿಸಿದ ಘಟನೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಘಟನೆ ಸಂಬಂಧ ಸುಳ್ಯಪದವ್ ನಿವಾಸಿ ಝೋಹರಾ ಮತ್ತು ಅವರ ಮಗನ ವಿರುದ್ಧ ದ ಕ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶಾಜ್ಯೋತಿರವರು ತಪಾಸಣೆ ಸಂಬಂಧ ಪರ್ಯಟನೆ ಮಾಡುವಾಗ ಅಜೀಮ್ ಕೈಮರ್ ವೀರಮಂಗಿಲ ಎಂಬವರ ಕಡೆಯವರಾದ ಜೊಹರಾ ಮತ್ತು ಅವರ ಮಗ ಏರು ಧ್ವನಿಯಲ್ಲಿ ಮಾತನಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಅವರ ಮಗ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿ ಕರ್ತ್ಯವ್ಯ ನಿರತ ವೈದ್ಯಾಧಿಕಾರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇಬ್ಬರ ವಿರುದ್ಧ ಕಲಂ 132,74,79 3 3(5) BNS 2023 ಮೇರೆಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!