Saturday, August 1, 2026
spot_imgspot_img
spot_imgspot_img

ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಇಡ್ಕಿದು ಗ್ರಾ.ಪಂ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಬಿಜೆಪಿ ಪಕ್ಷದಿಂದ ಉಚ್ಚಾಟನೆ; ರಾಜೀನಾಮೆ ನೀಡಲು ಸೂಚನೆ

- Advertisement -
- Advertisement -

ವಿಟ್ಲ: ಇಡ್ಕಿದು ಗ್ರಾಮದ ಕೊಪ್ಪ ಎಂಬಲ್ಲಿ ಮನೆಗೆ ಹೋಗುವ ರಸ್ತೆಯಲ್ಲಿ ಗೇಟ್ ಬೀಗ ಹಾಕುವ ಸಂದರ್ಭ ವಿಚಾರಿಸಲು ಬಂದ ಮಹಿಳೆಗೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಘಟನೆ ನಡೆದಿತ್ತು.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪದ್ಮನಾಭ ಸಪಲ್ಯ ಎಂಬವರ ಮೇಲೆ ಪ್ರಕರಣ ದಾಖಲಾಗಿತ್ತು.

ಇದೀಗ ಪದ್ಮನಾಭ ಸಪಲ್ಯ ಇವರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಉಚ್ಚಾಟನೆ ಮಾಡಲಾಗಿದೆ. ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿದ್ಯ ಕೊಡುವ ಪಾರ್ಟಿಯಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಘನತೆ, ಗೌರವ ವರ್ಚಸ್ಸಿಗೆ ಹಾನಿಯುಂಟುಮಾಡಿರುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಹಾಗೂ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ತಿಳಿಸಿದ್ದಾರೆ.

- Advertisement -

Related news

error: Content is protected !!