Saturday, August 22, 2026
spot_imgspot_img
spot_imgspot_img

ವಿಜಯಪುರ: ಬಾವಿಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ತಂದೆ ನಾಪತ್ತೆ

- Advertisement -
- Advertisement -

ವಿಜಯಪುರ: ಬಾವಿಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದ್ದು, ತಂದೆ ನಾಪತ್ತೆಯಾಗಿರುವ ಘಟನೆ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

ಸಾಕ್ಷಿ ( 15 ), ರಕ್ಷಿತಾ ( 10 ) ಮೃತ ಬಾಲಕಿಯರು.

ಲಕ್ಷ್ಮೀಬಾಯಿ ಹಾಗೂ ಸಾಬಣ್ಣ ದಂಪತಿ ಮದುವೆಯಾಗಿ ಸುಮಾರು 13 ವರ್ಷಗಳಾಗಿದ್ದು, ಇವರಿಗೆ ಒಟ್ಟು ಐದು ಜನ ಮಕ್ಕಳಿದ್ದಾರೆ.
ವರಮಹಾಲಕ್ಷ್ಮಿ ಪೂಜೆಯ ನಿಮಿತ್ತ ಲಕ್ಷ್ಮೀಬಾಯಿ ಅವರು, ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಅಣ್ಣನ ಮನೆಗೆ ತೆರಳಿದ್ದರು. ಇನ್ನೊಬ್ಬ ಮಗ ಕೋಲಾರದಲ್ಲಿ ಅಜ್ಜ-ಅಜ್ಜಿಯ ಜೊತೆಗಿದ್ದ. ತಮ್ಮ8 ಎಕರೆ ಜಮೀನಿನ ತೋಟದ ಮನೆಯಲ್ಲಿ ಗಂಡ ಸಾಬಣ್ಣ ಹಾಗೂ ಇಬ್ಬರು ಮಕ್ಕಳು ಉಳಿದುಕೊಂಡಿದ್ದರು ಎನ್ನಲಾಗಿದೆ.

ಲಕ್ಷ್ಮೀಬಾಯಿ ಅವರು ಮನೆಗೆ ಹಿಂತಿರುಗಿದಾಗ ಗಂಡ ಮತ್ತು ಇಬ್ಬರು ಮಕ್ಕಳು ಕಂಡುಬರಲಿಲ್ಲ. ಸಂಜೆ 4:30 ರಿಂದ 5:0 ಗಂಟೆಯ ಸುಮಾರಿಗೆ ಜಮೀನಿನ ಬಾವಿಯ ಬಳಿ ಗಂಡ ಸಾಬಣ್ಣನ ಬಟ್ಟೆಗಳು ಬಿದ್ದಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡು ಸಂಬಂಧಿಕರಿಗೆ ಕರೆ ಮಾಡಿ ಹುಡುಕಾಟ ಆರಂಭಿಸಿದ್ದಾರೆ.

ರಾತ್ರಿ ವೇಳೆಗೆ ಬಾವಿಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಬಾವಿಯ ನೀರನ್ನು ಖಾಲಿ ಮಾಡಿಸಿ ಪರಿಶೀಲಿಸಿದರೂ ಗಂಡ ಸಾಬಣ್ಣನ ಸುಳಿವು ಸಿಕ್ಕಿಲ್ಲ. ಬಾವಿಯ ದಡದಲ್ಲಿ ಆತನ ಬಟ್ಟೆಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

‘ಇಬ್ಬರು ಮಕ್ಕಳ ಮೃತದೇಹಗಳನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ಸಾವಿನ ಬಗ್ಗೆ ತಾಯಿ ಲಕ್ಷ್ಮೀಬಾಯಿ ಅವರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಸಾಬಣ್ಣ ಎಲ್ಲಿಗೆ ತೆರಳಿದ್ದಾನೆ ಎಂಬುದರ ಕುರಿತು ಪೊಲೀಸ್‌ ಇಲಾಖೆಯಿಂದ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!