Friday, August 7, 2026
spot_imgspot_img
spot_imgspot_img

ಗುಡ್ಡ ಕುಸಿದು ಅಂಕೋಲ-ಶಿರಸಿ ರಸ್ತೆ ಬಂದ್

- Advertisement -
- Advertisement -

ಅಂಕೋಲಾ-ಶಿರಸಿ ಸಂಪರ್ಕಿಸುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದ್ದು, ಈ ಹೆದ್ದಾರಿಯಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಆತಂಕ ಮನೆಮಾಡಿದೆ.

ಗುಡ್ಡದ ಆಸುಪಾಸಿನ ನಿವಾಸಿಗಳು ಸ್ಥಳಾಂತರವಾಗಲು ಸೂಚನೆ ನೀಡಲಾಗಿದೆ. ಹೆದ್ದಾರಿ ಕುಸಿದಿದ್ದರೂ ವಾಹನಗಳು ಅಲ್ಲೇ ಸಂಚರಿಸುತ್ತಿವೆ. ಹೀಗಾಗಿ, ಮುಂದಾಗುವ ಅನಾಹುತ ತಪ್ಪಿಸಲು ಸ್ಥಳೀಯರೇ ಕಲ್ಲುಗಳನ್ನು ಅಡ್ಡ ಇಟ್ಟಿದ್ದಾರೆ.ದುರಂತ ಸಂಭವಿಸಬಾರದು ಎಂಬ ಕಾರಣಕ್ಕೆ ಜೀವದ ಹಂಗು ತೊರೆದು ಸ್ಥಳೀಯರೇ ಮುಂದೆ ನಿಂತು ರಸ್ತೆ ಬ್ಲಾಕ್ ಮಾಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!