Sunday, June 14, 2026
spot_imgspot_img
spot_imgspot_img

ಅಪರಿಚಿತರ ಗುಂಡಿನ ದಾಳಿಗೆ ಎಂಎನ್ಎಸ್ ನಾಯಕ ಬಲಿ!!

- Advertisement -
- Advertisement -

ಮುಂಬೈ: ಮಹಾರಾಷ್ಟ್ರ ನವನಿರ್ಮಣ್ ಸೇನಾ (ಎಂಎನ್‌ಎಸ್) ನಾಯಕ ಜಮೀಲ್ ಶೇಖ್ (49) ಎಂಬುವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಸೋಮವಾರ ಸಂಜೆ ಥಾಣೆಯಲ್ಲಿ ಹತ್ಯೆ ಮಾಡಲಾಗಿದ್ದು. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಜಮೀಲ್ ಶೇಖ್ ಬೈಕ್‌ನಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಬೈಕ್‌ನಲ್ಲಿ ಜಮೀಲ್ ಒಬ್ಬರೇ ಹೋಗುತ್ತಿದ್ದರು. ಗುಂಡಿನ ದಾಳಿಯಿಂದ ಕುಸಿದು ಬಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಂಬೈ ಮಿರರ್ ಪತ್ರಿಕೆ ಜಮೀಲ್ ಶೇಖ್ ಮೇಲೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಎಂಎನ್‌ಎಸ್ ನಾಯಕ ಜಮೀಲ್ ಶೇಖ್ ಥಾಣೆಯ ಸಿವಿಕ್ ವಾರ್ಡ್‌ ಅಧ್ಯಕ್ಷರಾಗಿದ್ದರು. ರಾಜಕೀಯ ದ್ವೇಷದಿಂದಲೇ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

- Advertisement -

Related news

error: Content is protected !!