Tuesday, August 4, 2026
spot_imgspot_img
spot_imgspot_img

ಧರ್ಮಸ್ಥಳ: ಬೊಳಿಯಾರ್‌ನಲ್ಲಿ ಕಾಡಾನೆ ದಾಳಿಗೆ ರಿಕ್ಷಾ ಜಖಂ: ಚಾಲಕ ಅಪಾಯದಿಂದ ಪಾರು..!

- Advertisement -
- Advertisement -

ಧರ್ಮಸ್ಥಳ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆಟೋರಿಕ್ಷಾವೊಂದು ಸಂಪೂರ್ಣ ಜಖಂಗೊಂಡ ಘಟನೆ ಧರ್ಮಸ್ಥಳದ ಬೊಳಿಯಾರ್‌ ಎಂಬಲ್ಲಿ ನಡೆದಿದೆ.

ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಗಳ ಹಿಂಡು ರಸ್ತೆ ಮಧ್ಯೆ ಎದುರಾಗಿದ್ದು ದಿನೇಶ್ ಇದನ್ನು ಗಮನಿಸಿ ಆತಂಕಗೊಂಡು ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ದೂರದಲ್ಲಿ ಅಡಗಿ ನಿಂತರು.

ಈ ವೇಳೆ ಗುಂಪಿನಲ್ಲಿದ್ದ ದೊಡ್ಡ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದ್ದು ಇದನ್ನು ಕಂಡ ದಿನೇಶ್ ಗಾಬರಿಗೊಂಡು ಸ್ಥಳದಲ್ಲಿಯೇ ಮೋರ್ಛೆ ಹೋಗಿದ್ದರು. ರಿಕ್ಷಾವನ್ನು ಪುಡಿ ಮಾಡುತ್ತಿರುವ ಶಬ್ದ ದಿನೇಶ್ ರವರ ಪತ್ನಿ ಹಾಗೂ ನೆರೆಯವರಿಗೆ ಕೇಳಿ ಸ್ಥಳಕ್ಕೆ ಬಂದು ದಿನೇಶ್ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ ಬಗ್ಗೆ ವರದಿಯಾಗಿದೆ. ಕಲ್ಲೇರಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು.

- Advertisement -

Related news

error: Content is protected !!