Sunday, June 29, 2025
spot_imgspot_img
spot_imgspot_img

ಮಂಗಳೂರು: ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ; ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು..!

- Advertisement -
- Advertisement -

ಮಂಗಳೂರು: ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಚಾರದಲ್ಲಿ ಎನ್.ಎಂ.ಪಿ.ಎ ಕಛೇರಿಯ ಡೆಪ್ಯೂಟಿ ಚೇರ್ಪರ್ಸನ್ ರವರ ಕಛೇರಿಗೆ ನುಗ್ಗಿ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸಹಿತ ಇಬ್ಬರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.09 ರಂದು ರಾತ್ರಿ ವೇಳೆ ಮಾಜಿ ಶಾಸಕ ಮೊಯಿದ್ದೀನ್ ಬಾವಾರವರು ಮತ್ತು ಅವರ ಇಬ್ಬರು ಸಹಚರರೊಂದಿಗೆ ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಷಯದ ಕುರಿತು ಎನ್.ಎಂ.ಪಿ.ಎ ಕಛೇರಿಯ ಡೆಪ್ಯೂಟಿ ಚೇರ್ಪರ್ಸನ್ ರವರ ಕಛೇರಿಗೆ ನುಗ್ಗಿ 15 ನಿಮಿಷ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರನ್ನು ಕಛೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೇ, ಅವರನ್ನು ತಡೆದು ನಿಲ್ಲಿಸಿರುತ್ತಾರೆ.

ಬಳಿಕ ಅವರು ಹೊರಗೆ ಬಂದಾಗಲೂ ಹಿಂಬಾಲಿಸುತ್ತಾ ಬೆದರಿಕೆ ಹಾಕಿ ಕಿರಿಚುತ್ತಾ ಬಂದಿದ್ದು, ಕಾರಿನಲ್ಲಿ ಬೇರೆ ಕರ್ತವ್ಯಕ್ಕೆ ಹೋಗುತ್ತಿರುವಾಗ ಕಾರನ್ನು ಸಹ ತಡೆದು ನಿಲ್ಲಿಸಿ, ವಾದ-ವಿವಾದ ಮಾಡಿರುವ ಬಗ್ಗೆ Secretary, NMPA, Panambur, Mangaluru ರವರು ಜೂ.10 ರಂದು ಸಂಜೆ ದೂರು ನೀಡಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025 ಕಲಂ 224,221,132, 126, 127, 226 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆದಿರುತ್ತದೆ.

- Advertisement -

Related news

error: Content is protected !!