Tuesday, June 9, 2026
spot_imgspot_img
spot_imgspot_img

ಕಡಬ: ಕೃಷಿಕ ವ್ಯಕ್ತಿಯ ಶೆಡ್ ದ್ವಂಸ ಮತ್ತು ಅಡಿಗೆ ತೋಟ ನಾಶ ಮಾಡಿದ ದುರುಳರು

- Advertisement -
- Advertisement -

ಕಡಬ ಠಾಣಾ ವ್ಯಾಪ್ತಿಯ ದೋಳ್ಪಾಡಿ ಗ್ರಾಮದಲ್ಲಿ ಕೃಷಿಕ ವ್ಯಕ್ತಿಯೊಬ್ಬರಿಗೆ ಸೇರಿದ ಶೆಡ್ ಮತ್ತು ಕೃಷಿ ತೋಟವನ್ನು ರಾತ್ರಿ ವೇಳೆ ಸ್ಥಳೀಯರು ಎನ್ನಲಾದ ವ್ಯಕ್ತಿಗಳು ಕೆಡವಿ ಧ್ವಂಸ ಮಾಡಿರುವ ಅಮಾವೀಯ ಘಟನೆ ಜೂ.10 ರಂದು ನಡೆದಿದೆ.

ಕೃಷಿ ನಾಶ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಈ ವೇಳೆ ಜಮೀನು ಕುಮ್ಕಿ ಜಮೀನು ಎಂಬುದಾಗಿ ತಿಳಿದು ಬಂದಿರುತ್ತದೆ. ಜಮೀನನ್ನು ಮಾರಾಟ ಮಾಡಿದಾತ ಹಾಗೂ ಖರೀದಿಸಿದಾತನ ನಡುವೆ ಜಮೀನು ಮಾರಾಟದ ವಿಚಾರದಲ್ಲಿ ಮನಸ್ತಾಪ ಉಂಟಾಗಿ, ಜಮೀನು ಮಾರಾಟ ಮಾಡಿದ ವ್ಯಕ್ತಿ ಅಲ್ಪ ಪ್ರಮಾಣದಲ್ಲಿ ಕೃಷಿಗೆ ಹಾಗೂ ಸದ್ರಿ ಸ್ಥಳದಲ್ಲಿದ್ದ ಶೆಡ್ ಗೆ ಹಾನಿ ಮಾಡಿರುವುದಾಗಿದೆ. ಈ ಘಟನೆಯು ಸಿವಿಲ್ ವ್ಯಾಜ್ಯವಾಗಿರುವ ಹಿನ್ನೆಲೆಯಲ್ಲಿ ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕರು ಜಮೀನು ಖರೀದಿಸಿದವರಿಗೆ ಹಾಗೂ ಜಮೀನು ಮಾರಾಟ ಮಾಡಿದಾತನಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿದ್ದು, ಘಟನಾಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿ, ಜಮೀನು ಮಾರಾಟ ಮಾಡಿದಾತನಿಗೆ ಹಾಗೂ ಖರೀದಿದಾರನಿಗೆ ಜಮೀನಿಗೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸುವಂತೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ

- Advertisement -

Related news

error: Content is protected !!