Sunday, June 29, 2025
spot_imgspot_img
spot_imgspot_img

ಇರಾನ್‌-ಇಸ್ರೇಲ್‌ ಸಂಘರ್ಷ; ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಮೃತ್ಯು..!

- Advertisement -
- Advertisement -

ಟೆಲ್‌ ಅವಿವ್‌/ಟೆಹ್ರಾನ್‌: ಆಪರೇಷನ್‌ ʻರೈಸಿಂಗ್‌ ಲಯನ್‌ʼ ಬಳಿಕ ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್‌ ಮಿಸೈಲ್‌ ದಾಳಿಗೆ ಇಸ್ರೇಲ್‌ ಕೂಡ ಮಿಸೈಲ್‌ಗಳ ಸುರಿಮಳೆಯನ್ನೇ ಸುರಿಸಿದೆ.

ಅಣ್ವಸ್ತ್ರ , ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ.

ಈ ದಾಳಿಯಲ್ಲಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅಣ್ವಸ್ತ್ರ ವಿಜ್ಞಾನಿಗಳು ಸೇರಿದಂತೆ ಈವರೆಗೆ 14 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅತ್ತ ಇರಾನ್‌ ಕೂಡ ಇಸ್ರೇಲ್‌ ಮೇಲೆ 200 ಖಂಡಾಂತರ ಕ್ಷಿಪಣಿಗಳು ಹಾಗೂ 100 ಡ್ರೋನ್‌ಗಳಿಂದ ಭೀಕರ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಟೆಲ್‌ ಅವಿವ್‌, ಜೆರುಸಲೆಮ್‌ ಸೇರಿದಂತೆ ಮಿಲಿಟರಿ ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ 4ನೇ ದಿನವೂ ಮುಂದುವರಿದಿದೆ.

- Advertisement -

Related news

error: Content is protected !!