Friday, June 5, 2026
spot_imgspot_img
spot_imgspot_img

ಆಂಧ್ರ ಮಾಜಿ ಸಿಎಂ ಜಗನ್ ರ‍್ಯಾಲಿ ವೇಳೆ ಅವಘಡ – ಕಾರಿನಡಿ ಸಿಲುಕಿ ವೃದ್ಧ ಸಾವು

- Advertisement -
- Advertisement -

ಆಂಧ್ರಪ್ರದೇಶದಲ್ಲಿ ಮಾಜಿ ಸಿಎಂ ಜಗನ್ ಮೋಹನ್‌ ರೆಡ್ಡಿ ಬೃಹತ್ ರ‍್ಯಾಲಿ ನಡೆಸುವ ವೇಳೆ ಭಾರೀ ಅವಘಡ ಸಂಭವಿಸಿದೆ. ಜಗನ್ ತೆರಳುತ್ತಿದ್ದ ಕಾರಿನಡಿ ಸಿಲುಕಿ 55 ವರ್ಷ ವ್ಯಕ್ತಿ ಮೃತಪಟ್ಟಿದ್ದಾರೆ.

ಚೀಲಿ ಸಿಂಗಯ್ಯ ಮೃತ ವ್ಯಕ್ತಿ. ಸಿಂಗಯ್ಯ ಜಗನ್ ಮೋಹನ್ ರೆಡ್ಡಿಯ ದೊಡ್ಡ ಅಭಿಮಾನಿಯಾಗಿದ್ದರು. ಜೂನ್ 18ರಂದು ಗುಂಟೂರಿನಲ್ಲಿ ಜಗನ್ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಜಗನ್ ನೋಡಲು ಬಂದ ವೇಳೆ ನೂಕು ನುಗ್ಗಲು ತಳ್ಳಾಟವಾಗಿ ಸಿಂಗಯ್ಯ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾರು ಚಾಲಕನಿಗೆ ಕಾಣದೇ ಸಿಂಗಯ್ಯ ಮೇಲೆ ಕಾರು ಹರಿಸಿದ್ದಾನೆ. ಕೂಡಲೇ ಕಾರು ನಿಲ್ಲಿಸಿದರೂ ತಲೆಗೆ ಗಂಭೀರ ಗಾಯವಾಗಿದ್ದರಿಂದ ಇಂದು ಸಿಂಗಯ್ಯ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!