Saturday, May 4, 2024
spot_imgspot_img
spot_imgspot_img

ಗೂಡ್ಸ್​​ ವಾಹನ ಡಿಕ್ಕಿ; ಮಹಿಳೆ ಸಾವು..!

- Advertisement -G L Acharya panikkar
- Advertisement -

ಕ್ರೂಸರ್ ಹಾಗೂ ಗೂಡ್ಸ್​​ ವಾಹನಗಳು ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಮಂಗಳೂರು ಗ್ರಾಮದ ಸುನಂದಾ ಹಾದಿಮನಿ (40) ಎಂದು ಗುರುತಿಸಲಾಗಿದೆ.

ಕ್ರೂಸರ್‌ ಹಾಗೂ ಗೂಡ್ಸ್‌ ವಾಹನಗಳು ಪರಸ್ಪರ ಡಿಕ್ಕಿ ಆಗಿದೆ. ಈ ವೇಳೆ ವಾಹನದಲ್ಲಿದ್ದ ಸುನಂದಾ ಸ್ಥಳದಲ್ಲೇ ಮೃತಪಟ್ಟಿದ್ದರೇ, ಇತರರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಧಬಾವಿ ಕ್ರಾಸ್​​ ಬಳಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿಜಯಪುರ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!