Tuesday, August 4, 2026
spot_imgspot_img
spot_imgspot_img

ಎಚ್ಚರಿಕೆ..!ಸೈಬರ್ ಅಪರಾಧಿಗಳು ನೀಡುವ ಹೂಡಿಕೆ, ಉದ್ಯೋಗವಕಾಶಗಳ ಮೋಸದ ಬಲೆಗೆ ಬೀಳಬೇಡಿ

- Advertisement -
- Advertisement -

ಸೈಬರ್ ಅಪರಾಧಿಗಳು ನಕಲಿ ಹೂಡಿಕೆ ಅವಕಾಶಗಳ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಭರವಸೆ ನೀಡಿ ನಿಮ್ಮನ್ನು ಮೋಸಗೊಳಿಸುತ್ತಾರೆ. ನೀವು ಹಣ ಹೂಡಿಕೆ ಮಾಡಿದ ನಂತರ ನಿಮ್ಮ ಹಣ ಕಣ್ಮರೆಯಾಗುತ್ತದೆ.

ಈ ರೀತಿಯ ಮೋಸಗಳು ವೃತ್ತಿಪರವಾಗಿ ಕಾಣಿಸುತ್ತವೆ ಮತ್ತು ಅದಕ್ಕಾಗಿ ಕೆಳಗಿನ ವಿಧಾನಗಳನ್ನು ಬಳಸಬಹುದು:

ನಕಲಿ ವೆಬ್‌ಸೈಟುಗಳುವಾಟ್ಸಾಪ್ ಗುಂಪುಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳು

ಸಿನಿಮಾ ತಾರೆಯರ/ಹೆಸರಾಂತ ವ್ಯಕ್ತಿಗಳ ನಕಲಿಪ್ರಮಾಣಪತ್ರಗಳು

ಮೋಸದ ಆ್ಯಪ್‌ಗಳು ಅಥವಾ ಸೋಷಿಯಲ್ ಮೀಡಿಯಾ ಜಾಹೀರಾತುಗಳು

ಇವುಗಳ ಬಗ್ಗೆ ಸಾಮಾನ್ಯ ಎಚ್ಚರಿಕೆಯ ಸಂಕೇತ :

“ಖಚಿತ” ಹೆಚ್ಚುವರಿ ಲಾಭದ ಭರವಸೆ

ತಕ್ಷಣ ಹೂಡಿಕೆಗೆ ಒತ್ತಡ

ಹಣದ ದ್ವಿಗುಣ/ತ್ರಿಗುಣ ಲಾಭದ ಭರವಸೆ ನೀಡಿಕೆ

ನೋಂದಾಯಿಸದ ಕಂಪನಿಗಳು ಅಥವಾ ಏಜೆಂಟ್‌ಗಳು

ಯುಪಿಐ/ಕ್ರಿಸ್ಟೋ ಪಾವತಿ ಕೇಳುವುದುನಕಲಿ ಲಾಭ ತೋರಿಸುವ ನಕಲಿ ಸ್ಟ್ರೀನ್‌ಶಾಟ್ಗಳು

ಸೈಬರ್ ಅಪರಾಧಕ್ಕೆ ನಿಜವಾಗಿ ಬಲಿಯಾದವರ ಕಥೆಗಳು:

ಸುರತ್ಕಲ್, ಮಂಗಳೂರುನಲ್ಲಿ ವಾಟ್ಸಾಪ್ಯೂಪ್‌ಗಳ ಮೂಲಕ crypto trading ನಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಹಂತ ಹಂತವಾಗಿ ₹1.57 ಕೋಟಿ ಹಣ ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾರೆ.

ಕೆ.ಪಿ.ಟಿ, ಮಂಗಳೂರುನಲ್ಲಿ ಶೇರು ಮಾರುಕಟ್ಟೆ ಲಾಭದ ಆಶಯದಲ್ಲಿ WhatsApp ವಾಟ್ಸಾಪ್ ತರಬೇತಿ ಗ್ರೂಪ್ ಮೂಲಕ ₹37.49 ಲಕ್ಷ ಹೂಡಿಕೆ ಮಾಡಿದ್ದು, ಬಳಿಕ ಲಾಭಾಂಶ ಪಡೆಯಲು ಹೆಚ್ಚು ತೆರಿಗೆ ಪಾವತಿಸುವಂತೆ ಒತ್ತಾಯಿಸಿ ಮೋಸ ಮಾಡಿದ್ದಾರೆ.

ಪಂಜಿಮೊಗರು, ಮಂಗಳೂರುನಲ್ಲಿ ಇನ್ಸಾಗ್ರಾಂನಲ್ಲಿ “Work from Home” ಜಾಹೀರಾತು ನೆಪದಲ್ಲಿ ₹27.01 ಲಕ್ಷ ಹಣವನ್ನು ಅವರ ಹಾಗೂ ಕುಟುಂಬ ಸದಸ್ಯರ ಖಾತೆಯಿಂದ ವರ್ಗಾವಣೆ ಮಾಡಿಸಿ ಮೋಸ ಮಾಡಿದ್ದಾರೆ.

ಕಂಕನಾಡಿ, ಮಂಗಳೂರುನಲ್ಲಿ Facebook ಜಾಹೀರಾತು ಮುಖಾಂತರ ಶೇರು ಮಾರುಕಟ್ಟೆ ಲಾಭದ ಭರವಸೆ ನೀಡಿ ₹30.55 ಲಕ್ಷ ಹೂಡಿಕೆ ಮಾಡುವಂತೆ ನಂಬಿಸಿ, ಹೂಡಿಕೆ ನಂತರ ಹಣ ನೀಡದೇ ಮೋಸ ಮಾಡಿದ್ದಾರೆ.

ಉರ್ವಾ, ಮಂಗಳೂರಿನಲ್ಲಿ ಟೆಲಿಗ್ರಾಮ್ ಖಾತೆ ಮೂಲಕ crypto currency tradingಸಲಹೆ ನೀಡಿ ₹13.57 ಲಕ್ಷ ಹೂಡಿಕೆ ಮಾಡಿಸಿ, ಯಾವುದೇ ಲಾಭ, ಹೂಡಿಕೆ ಹಣ ನೀಡದೇ ಮೋಸ ಮಾಡಿದ್ದಾರೆ.

ವಿವಿಧ ರೀತಿಯಾಗಿ ಸೈಬರ್ ಅಪರಾಧಿಗಳು ಮುಗ್ಧ ಜನರನ್ನು ಮೋಸದ ಬಲೆಗೆ ಸಿಲುಕಿಸುತ್ತಿದ್ದಾರೆ. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ.

- Advertisement -

Related news

error: Content is protected !!