Friday, July 4, 2025
spot_imgspot_img
spot_imgspot_img

ಹಾಸನ: ಹೃದಯಾಘಾತದಿಂದ ಯುವಕ ಮೃತ್ಯು..!

- Advertisement -
- Advertisement -

ಹಾಸನ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ನಗರ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ಮದನ್ (21) ಎಂದು ಗುರುತಿಸಲಾಗಿದೆ.

ಮದನ್ ಮೂಲತಃ ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದವವರಾಗಿದ್ದು, ತಾಯಿಯ ಜೊತೆ ಚನ್ನಪಟ್ಟಣದಲ್ಲಿ ವಾಸವಿದ್ದರು. ಎರಡು ದಿನಗಳ ಹಿಂದೆ ಇವರು ಚಿಕ್ಕಕೊಂಡಗುಳದಲ್ಲಿರುವ ತನ್ನ ಬಾವನ ಮನೆಗೆ ಆಗಮಿಸಿದ್ದರು.ಗುರುವಾರ ರಾತ್ರಿ ಮನೆಯಲ್ಲಿದ್ದಾಗ ಮದನ್‌ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

- Advertisement -

Related news

error: Content is protected !!