- Advertisement -
- Advertisement -



ಯುವತಿಯೋರ್ವಳು ಕಾವೇರಿ ನದಿಗೆ ಬಿದ್ದು ಆತ್ಮಹತ್ಯೆಗೆ ಮುಂದಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ಜರುಗಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಮಂಜುನಾಥ್ ಅವರ ಪುತ್ರಿ ಸಿಂಚನಾ (24) ಕಾವೇರಿ ನದಿಗೆ ಹಾರಿರುವ ಯುವತಿ ಆಗಿದ್ದಾಳೆ. ಯುವತಿ ಸಿಂಚನಾ ಎಂಸಿಎ ಪದವೀಧರೆಯಾಗಿದ್ದು, ಕೆಲ ವರ್ಷಗಳಿಂದೀಚೆಗೆ PCOD ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಾಗಾಗಿದ್ದರು ಎನ್ನಲಾಗಿದೆ.
- Advertisement -








