Friday, June 5, 2026
spot_imgspot_img
spot_imgspot_img

ನಟ ದರ್ಶನ್‌ಗೆ ಮತ್ತೆರಡು ದಿನ ರಿಲೀಫ್: ಸುಪ್ರೀಂನಲ್ಲಿ ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..!

- Advertisement -
- Advertisement -

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 24ಕ್ಕೆ ಮುಂದೂಡಿದೆ. ಹೀಗಾಗಿ, ದರ್ಶನ್‌ಗೆ ಮತ್ತೆರಡು ದಿನ ರಿಲೀಫ್ ಸಿಕ್ಕಿಂದಂತಾಗಿದೆ.

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿ, ಜಾಮೀನು ಪಡೆದು ಹೊರ ಬಂದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ, ಈಗ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ ದರ್ಶನ್ ಜಾಮೀನು ಭವಿಷ್ಯ ಗುರುವಾರ ನಿರ್ಧಾರವಾಗಲಿದೆ.

ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು. ಆದರೆ, ಅವರಿಗೆ ಬೇರೆ ಪ್ರಕರಣದಲ್ಲಿ ಇಂದು ವಾದ ಮಂಡಿಸಬೇಕಿದೆ. “ನಿನ್ನೆ ರಾತ್ರಿ ನನಗೆ ಈ ಕೇಸ್ ಬಂತು. ಆದರೆ, ಇಷ್ಟು ಬೇಗ ಕೇಸ್‌ನ ವಾದ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಒಂದು ಒಂದು ದಿನ ಸಮಯ ಕೇಳಿದ್ದೇನೆ. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಕೊಟ್ಟಿದೆ. ಹೀಗಾಗಿ, ಈ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ನಾನು ಬಂಧನದ ಕಾರಣಗಳ ಬಗ್ಗೆ ವಾದ ಮಂಡಿಸುವುದಿಲ್ಲ. ಕೇಸ್‌ನ ಮೆರಿಟ್ಸ್ ಮೇಲೆ ವಾದ ಮಂಡಿಸುತ್ತೇನೆ” ಎಂದು ದರ್ಶನ್ ಪರ ಹಿರಿಯ ವಕೀಲ ಸಿದ್ದಾರ್ಥ್ ದವೆ ತಿಳಿಸಿದ್ದಾರೆ.

- Advertisement -

Related news

error: Content is protected !!