Saturday, April 27, 2024
spot_imgspot_img
spot_imgspot_img

ಶ್ರೀ ಶಾರದ ನೃತ್ಯ ಕಲಾ ಕೇಂದ್ರ ವಿಟ್ಲ ಶಾಖೆ ಅಳಕೆಮಜಲು ಇದರ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಶಾರದ ನೃತ್ಯ ಕಲಾ ಕೇಂದ್ರ ವಿಟ್ಲ ಶಾಖೆ ಅಳಕೆಮಜಲು ಇದರ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ದಿನಾಂಕ 17/10/2020 ಶನಿವಾರದಂದು ಶ್ರೀ ಶಾರದಾಂಬ ಭಜನಾ ಮಂದಿರ ಅಶೋಕನಗರ ಅಳಕೆಮಜಲು ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದಂತ ಅಧ್ಯಕ್ಷರಾದ ಶ್ರೀ ರಾಜರಾಮ್ ಶೆಟ್ಟಿ ಕೋಲ್ಪೆ ಗುತ್ತು ಇವರು ಯಕ್ಷಗಾನ ದ ಅಭಿಯಾನದ ಕುರಿತು ಮಕ್ಕಳಿಗೆ ಯಕ್ಷಗಾನ ದ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹವನ್ನು ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣಪ್ಪ ಸಪಲ್ಯ ಕೆಮನಾಜೆ.ಬಾಲಕೃಷ್ಣ ಶೆಟ್ಟಿ ಹಾಗೂ ಶ್ರೀ ಶಾರದ ನೃತ್ಯ ಕಲಾ ಕೇಂದ್ರ ವಿಟ್ಲ ಇದರ ನಿರ್ದೇಶಕಿಯಾದ ಶ್ರೀಮತಿ ಮಲ್ಲಿಕಾ ನಾರಾಯಣ ಉರಿಮಜಲು ಉಪಸ್ಥಿತರಿದ್ದರು.

ಶ್ರೀ ಶಾರದ ನೃತ್ಯ ಕಲಾ ಕೇಂದ್ರ ವಿಟ್ಲ ಇದರ ಯಕ್ಷಗಾನ ತರಬೇತಿಯ ಗುರುಗಳಾದಂತಹ ಶ್ರೀ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಇವರು ಯಕ್ಷಗಾನ ಎಂಬುವುದು ಏನು.? ಅದಕ್ಕೆ ಇರುವ ಘನತೆ ,ಗೌರವ ಮುಖದ ಬಣ್ಣದ ಮಹತ್ವವನ್ನು ಬಹಳ ಅರ್ಥಪೂರ್ಣವಾಗಿ ತಿಳಿಸುತ್ತ ಮಕ್ಕಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಹಾರೈಸಿದರು. ಕು/ನೇತ್ರ ಹಾಗೂ ರಶ್ಮಿ ಇವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪಾರಂಭಿಸಿದರು.

ಶ್ರೀ ಶಾರದ ನೃತ್ಯ ಕಲಾ ಕೇಂದ್ರ ವಿಟ್ಲ ಇದರ ವಿದ್ಯಾರ್ಥಿನಿ ಕು/ಭವ್ಯಜ್ಯೋತಿ ಕೆ ವಿಟ್ಲ ಇವರು ನಿರೂಪಣೆಯನ್ನು ಮಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕು/ಪ್ರಜ್ಞಾ ಕೆ ವಿಟ್ಲ ಇವರು ಕಾರ್ಯಕ್ರಮವನ್ನು ವಂದಿಸಿದರು.

- Advertisement -

Related news

error: Content is protected !!