- Advertisement -
- Advertisement -



ಕೊಯನಾಡು: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಕೊಯನಾಡಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ನಿಹಾದ್, ರಿಷಾನ್, ಮತ್ತು ರಾಶಿಬ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಮೃತ ಯುವಕನ ಬಗ್ಗೆ ಮಾಹಿತಿ ಇನಷ್ಟೇ ಗೊತ್ತಾಗಬೇಕಿದೆ.
ಗೊಣಿಕೊಪ್ಪ ಮತ್ತು ಹುಣಸೂರಿನ ನಾಲ್ವರು ಯುವಕರು ದ.ಕ. ಜಿಲ್ಲೆಯ ಉಳ್ಳಾಲಕ್ಕೆ ಗುರುವಾರ ಕಾರಿನಲ್ಲಿ ತೆರಳಿದ್ದವರು ಅಲ್ಲಿಂದ ಇಂದು ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಕಾರಿಗೆ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಕಾರು ಕೊಡಗು ಜಿಲ್ಲೆ ಗೋಣಿಕೊಪ್ಪ ಮೂಲದ್ದೆಂದು ತಿಳಿದು ಬಂದಿದೆ. ಕೊಡಗು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆಯುತ್ತಿದ್ದಾರೆ.
- Advertisement -








