- Advertisement -
- Advertisement -



ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ವಕೀಲರೊಬ್ಬರ ಮನೆಗೆ ಕಳ್ಳರು ನುಗ್ಗಿ ದಾಖಲೆ ಪತ್ರಗಳನ್ನು ಕಳವುಗೈದ ಘಟನೆ ನಡೆದಿದೆ.
ವಕೀಲರಾದ ಸಫಿಯಾ ನೌಫಲ್ ಎಂಬವರ ಮನೆ ಮಂದಿ ಸುಮಾರು ಒಂದು ತಿಂಗಳ ಹಿಂದೆ ಮನೆಗೆ ಬೀಗ ಹಾಕಿ ವಿದೇಶಕ್ಕೆ ತೆರಳಿದ್ದು, ಮನೆಯಲ್ಲಿ ಯಾರು ಇರದ ಪರಿಣಾಮ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟುಗಳನ್ನು ಜಾಲಾಡಿದ್ದಾರೆ.
ಏನೂ ಸಿಗದ ಕಾರಣ ವಕೀಲರಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಪಕ್ಕದ ಮನೆಯವರು ವಿದೇಶದಲ್ಲಿರುವ ಮನೆ ಮಂದಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
- Advertisement -








