Friday, June 19, 2026
spot_imgspot_img
spot_imgspot_img

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಪರಿಸರದಲ್ಲಿ ಏರ್‌ಟೆಲ್‌ ನೆಟ್‌ವರ್ಕ್‌ ಕಡಿತ: ಜನರ ಪರದಾಟ..!

- Advertisement -
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಏರ್‌ಟೆಲ್‌ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದ್ದು, ಇದರಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ.

ಕುಂಡಡ್ಕ ಪರಿಸರದಲ್ಲಿ ಅತೀ ಹೆಚ್ಚು ಜನರು ಏರ್‌ಟೆಲ್‌ ಸಿಮ್‌ ಕಾರ್ಡ್‌ ಉಪಯೋಗಿಸುತ್ತಿದ್ದು, ಆದರೆ ನಿರಂತರ ಈ ಭಾಗದ ಜನರು ನೆಟ್‌ವರ್ಕ್‌ ಇಲ್ಲದೆ ಮೊಬೈಲ್‌ ಉಪಯೋಗಕ್ಕಾಗಿ ಇನ್ನೊಂದು ಜಾಗವನ್ನು ಅವಲಂಬಿಸುವಂತಾಗಿದೆ.

ಬೆಲೆಬಾಳುವ ಮೊಬೈಲ್‌ ಇದೆ ಆದರೆ ಸ್ವಲ್ಪವೂ ನೆಟ್‌ವರ್ಕ್ ಇಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಡಿದ್ದು, ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಇಲ್ಲಿನ ಜನರ ಮೊಬೈಲ್‌ ನೆಟ್‌ವರ್ಕ್‌. ಇದರಿಂದ ತುರ್ತು ಸಂದರ್ಭದಲ್ಲಿ ಯಾರಿಗಾದರೂ ಫೋನ್ ಮಾಡಿ ತಿಳಿಸೋಣ ಎಂದರೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಏರ್‌ಟೆಲ್‌ ಕೇಂದ್ರದವರು ಆದಷ್ಟು ಬೇಗನೆ ಗಮನ ಹರಿಸಿ, ಸೂಕ್ತ ಪರಿಹಾರ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!