- Advertisement -
- Advertisement -



ವಿಟ್ಲ: ಖಾಸಗಿ ಬಸ್ ನಿಯಂತ್ರಣ ತಪ್ಪಿ ಬಿಲ್ಡಿಂಗ್ ನ ನಿಯಂತ್ರಣ ಗೋಡೆಗೆ ಡಿಕ್ಕಿ ಹೊಡೆದು ಡ್ರೈವರ್ ಸಹಿತ ಪ್ರಯಾಣಿಕರು ಗಾಯಗೊಂಡ ಘಟನೆ ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ. ವಿಟ್ಲದಿಂದ ಕನ್ಯಾನಕ್ಕೆ ತೆರಳುತ್ತಿದ್ದ ಮೆರ್ಸಿ ಬಸ್ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಬಳಿಯ ನಿಯಂತ್ರಣ ಗೋಡೆಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -








