SIT ಗೆ ಹಸ್ತಾಂತರ: ಬಂಗ್ಲಗುಡ್ಡೆಯಲ್ಲಿ ಮಣ್ಣಿನ ಮೇಲ್ಬಾಗದಲ್ಲಿ ಪತ್ತೆಯಾದ ಅಸ್ತಿಪಂಜರ


ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಾಯ್ದೆಯ ಕಲಂ 211(ಎ) ಅಡಿಯಲ್ಲಿನ ಪ್ರಕರಣ ಸಂಖ್ಯೆ 39/2025ಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ಮುಖ್ಯ ಪ್ರಕರಣದ ಜೊತೆಗೆ, ಎರಡು ಅಸ್ವಾಭಾವಿಕ ಮರಣ ಪ್ರಕರಣಗಳು ಮತ್ತು ಒಂದು ದೂರರ್ಜಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರ (ಡಿಜಿ ಮತ್ತು ಐಜಿಪಿ) ಅನುಮೋದನೆಯೊಂದಿಗೆ ವಿಶೇಷ ತನಿಖಾ ತಂಡಕ್ಕೆ (SIT) ವರ್ಗಾಯಿಸಲಾಗಿದೆ. ಈ ಹಿಂದೆ , ದಿನಾಂಕ 19.07.2025 0 ಅ.ಕ್ರ 39/2025 ಪ್ರಕರಣವನ್ನು ಎಸ್ಐಟಿಗೆ ವಹಿಸಲಾಗಿತ್ತು. ಇದೀಗ, ಎಸ್ಐಟಿ ತಂಡದಿಂದ ವರದಿಯಾದ ಎರಡು ಹೊಸ ಪ್ರಕರಣಗಳು ಮತ್ತು ಒಂದು ದೂರನ್ನು ತನಿಖೆಯ ಭಾಗವಾಗಿ ಸೇರಿಸಿಕೊಳ್ಳಲಾಗಿದೆ.
ಯು.ಡಿ.ಆರ್ ಸಂಖ್ಯೆ 35/2025: ಜು.31 ರಂದು ಎಸ್ಐಟಿ ತಂಡವು ಉತ್ಪನನ ನಡೆಸುತ್ತಿದ್ದಾಗ, ನಿಗದಿತ ಸ್ಥಳವೊಂದರಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು.ಯು.ಡಿ.ಆರ್ ಸಂಖ್ಯೆ: 36/2025: ಉತ್ಪನನಕ್ಕಾಗಿ ಗುರುತಿಸಲಾದ ಸ್ಥಳಗಳ ಹೊರತಾಗಿ, ಆ 4 ರಂದು ಬೇರೊಂದು ಜಾಗದಲ್ಲಿ ಮಣ್ಣಿನ ಮೇಲೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಕುರಿತು ದಿನಾಂಕ ಆ.5 ರಂದು ಧರ್ಮಸ್ಥಳ ಠಾಣೆಯಲ್ಲಿ ಮತ್ತೊಂದು ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು.ಜಯಂತ್ ಎಂಬವರಿಂದ ದೂರು:ಇಚಿಲಂಪಾಡಿ ನಿವಾಸಿ ಜಯಂತ್ ಎಂಬುವವರು, ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದೆ ಎನ್ನಲಾದ ಯುವತಿಯ ಮೃತದೇಹವನ್ನು ಕಾನೂನುಬಾಹಿರವಾಗಿ ಹೂತುಹಾಕಿರುವ ಬಗ್ಗೆ ದೂರು ನೀಡಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ದಿನಾಂಕ ಆ. 4 ರಂದು ಧರ್ಮಸ್ಥಳ ಠಾಣೆಯಲ್ಲಿ 200/DPS/2025 ರಂತೆ ದೂರರ್ಜಿ ದಾಖಲಾಗಿತ್ತು.ಈ ಮೂರೂ ಪ್ರಕರಣಗಳನ್ನು ಇದೀಗ ಹೆಚ್ಚಿನ ತನಿಖೆಗಾಗಿ ಎಸ್ಐಟಿಗೆ ವರ್ಗಾಯಿಸಲಾಗಿದ್ದು. ಧರ್ಮಸ್ಥಳದ ಸುತ್ತಲಿನ ನಿಗೂಢ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಂಡಿದೆ.ಈ ಮೂರೂ ಪ್ರಕರಣಗಳನ್ನು ಇದೀಗ ಹೆಚ್ಚಿನ ತನಿಖೆಗಾಗಿ ಎಸ್ಐಟಿಗೆ ವರ್ಗಾಯಿಸಲಾಗಿದ್ದು. ಧರ್ಮಸ್ಥಳದ ಸುತ್ತಲಿನ ನಿಗೂಢ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಂಡಿದೆ.








