Wednesday, September 23, 2026
spot_imgspot_img
spot_imgspot_img

3.15 ಕೋಟಿ ವಂಚನೆ ಆರೋಪ; ನಟ ಧೃವ ಸರ್ಜಾ ವಿರುದ್ಧ ಎಫ್‌ಐಆರ್

- Advertisement -
- Advertisement -

ಬೆಂಗಳೂರು: ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪದಡಿ ನಟ ಧೃವ ಸರ್ಜಾ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಟ ಧ್ರುವ ಸರ್ಜಾ ವಿರುದ್ಧ ಜಗ್ಗು ದಾದ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ 9.58 ಕೋ. ರೂ. ವಂಚಿಸಿದ ಕುರಿತು ದೂರು ನೀಡಿದ್ದಾರೆ. ಮುಂಬೈಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ಹೆಗ್ಡೆ ದೂರು ದಾಖಲಿಸಿದ್ದಾರೆ. 3.15 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ.

2016ರಲ್ಲಿ ನನ್ನ ಮೊದಲ ಸಿನಿಮಾ (ಜಗ್ಗು ದಾದ) ಯಶಸ್ಸು ಕಂಡಿತು. ಈ ವೇಳೆ ಧ್ರುವ ಸರ್ಜಾ ಅವರು ನನ್ನ ಕಚೇರಿಗೆ ಬಂದು ಸಿನಿಮಾ ಮಾಡುವ ಆಸಕ್ತಿ ತೋರಿಸಿರು. 2016ರಿಂದ 2018ರವರೆಗೆ ಅವರು ಈ ವಿಚಾರದಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಿದ್ದರು. ದಿ ಸೋಲ್ಕರ್ ಹೆಸರಿನ ಸಿನಿಮಾದ ಸ್ಕ್ರಿಪ್ಟ್ ಕೂಡ ನೀಡಿದರು. ಸಿನಿಮಾ ಕಾಂಟ್ರಾಕ್ಟ್ ಸಹಿ ಮಾಡುವುದಕ್ಕೂ ಮೊದಲು 3 ಕೋಟಿ ರೂಪಾಯಿ ಕೊಡುವಂತೆ ಧ್ರುವ ಕೇಳಿದ್ದರು. ಇದರಿಂದ ಫ್ಲ್ಯಾಟ್ ಖರೀದಿಸೋದಾಗಿ ಹೇಳಿದ್ದರು.ಸಿನಿಮಾದ ಕೆಲಸವನ್ನು ಶೀಘ್ರವೇ ಆರಂಭಿಸೋದಾಗಿ ತಿಳಿಸಿದ್ದರು ಎಂದು ರಾಘವೇಂದ್ರ ಹೆಗ್ಡೆ ಅಂಬೋಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಧ್ರುವ ಸರ್ಜಾ ತೋರಿಸಿದ ಉತ್ಸಾಹವನ್ನು ನಂಬಿದ ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಹಣ ಹೊಂದಿಸಿ ಧ್ರುವಗೆ 3.15 ಕೋಟಿ ರೂಪಾಯಿ ಹಣ ನೀಡಿದ್ದರು. 2019ರಲ್ಲಿ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಿನಿಮಾದ ಶೂಟ್ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ 2020ರೊಳಗೆ ಪೂರ್ಣಗೊಳ್ಳಬೇಕಿತ್ತು.

ಹಣವನ್ನು ಪಡೆದ ನಂತರ ಧ್ರುವ ಸರ್ಜಾ ಅವಧಿ ವಿಸ್ತರಣೆ ಕೋರಿದರು. ನಂತರ ಕೋವಿಡ್ ಬಂತು. ಕೋವಿಡ್ ಲಾಕ್‌ಡೌನ್ ಪೂರ್ಣಗೊಂಡರೂ ಬಳಿಕ ಸರ್ಜಾ ಪ್ರತಿಕ್ರಿಯಿಸಲಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ. ಸ್ಕ್ರಿಪ್ಟ್ ರೈಟರ್‌ಗಳಿಗೂ ಧ್ರುವ ಹಣ ಕೊಡಿಸಿದ್ದರಂತೆ. ಇದನ್ನು ಸೇರಿದರೆ ರಾಘವೇಂದ್ರ ಅವರ ಕೈಯಿಂದ 3.43 ಕೋಟಿ ರೂಪಾಯಿ ನೀಡಿದ್ದರು. ಧ್ರುವ ಯೋಜನೆಯಿಂದ ಹಿಂದೆ ಸರಿದಿದ್ದು ಮಾತ್ರವಲ್ಲ, ಕರೆಗಳನ್ನು ಸ್ವೀಕರಿಸಿಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ. ಬಡ್ಡಿ ಸೇರಿ ಈ ಹಣ ಈಗ 9.58 ಕೋಟಿ ರೂಪಾಯಿ ಆಗಿದೆ ಎಂಬುದಕ್ಕೆ ರಾಘವೇಂದ್ರ ದಾಖಲೆ ನೀಡಿದ್ದಾರೆ.

- Advertisement -

Related news

error: Content is protected !!