Monday, June 15, 2026
spot_imgspot_img
spot_imgspot_img

ಕೈಕಾರ:ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಪುತ್ತೂರು ದ.ಕ. ಆಶ್ರಯದಲ್ಲಿ 9ನೇ ವರ್ಷದ “ನಮ್ಮ ಕೈಕಾರಡ್‌ ಕೆಸರ್‌ಡೊಂಜಿ ದಿನ” ಕಾರ್ಯಕ್ರಮ

- Advertisement -
- Advertisement -

"ಸಹ್ಯಾದ್ರಿ ಸಿರಿ" ಪ್ರಶಸ್ತಿ- 2025 ಪ್ರಧಾನ ಸಮಾರಂಭ

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಒಡಿಯೂರು ಶ್ರೀ ಗುರುದೇವ ಬಳಗ ಪುತ್ತೂರು ಇವರ ಸಹಕಾರದೊಂದಿಗೆ 9ನೇ ವರ್ಷದ “ನಮ್ಮ ಕೈಕಾರಡ್‌ ಕೆಸರ್‌ಡೊಂಜಿ ದಿನ” ಕಾರ್ಯಕ್ರಮ ಕೈಕಾರ ಪಳ್ಳತ್ತಾರು ಶ್ರೀ ಜೂಮಾದಿ ದೈವಸ್ಥಾನದ ಬಳಿ ಶ್ರೀಮತಿ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ಆ. 10 ನೇ ಆದಿತ್ಯವಾರ ನಡೆಯಿತು.

ಕಾರ್ಯಕ್ರಮವನ್ನು ಬಟ್ಯ ಕೊರಗರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪ್ಯ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ಪುತ್ತೂರು ಕಂದಾಯ ನಿರೀಕ್ಷಕ ಕೆ. ಟಿ. ಗೋಪಾಲ, ಎನ್‌ ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ (ರಿ) ಪುತ್ತೂರು, ಪುತ್ತೂರು ತಾಲೂಕು ಬಂಟರ ಸಂಘ (ರಿ.) ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು,ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಉಪ್ಪಿನಂಗಡಿ ಕರ್ನಾಟಕ ಬ್ಯಾಂಕ್ ಲಿ. ಅಧಿಕಾರಿ ಹರೀಶ್ ಪೂಜಾರಿ ಉದ್ಯಂಗಳ, ಪಾಣಾಜೆ ಶ್ರೀ ಸುಬ್ರಹ್ಮಣೇಶ್ವರ ಭಜನಾ ಸಂಘ ಅಧ್ಯಕ್ಷ ಪಿ. ಜಿ. ಸುಬ್ರಹ್ಮಣ್ಯ ಭಟ್, ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವೈಸ್ ಪ್ರಿನ್ಸಿಪಾಲ್ ಸುದೀರ್‌ ಶೆಟ್ಟಿ ಚಿಪ್ಪಾರುಗುತ್ತು, ಫುಡಾ, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ ಭಟ್, ಪುತ್ತೂರು ಗುರುದೇವ ಬಳಗ ಅಧ್ಯಕ್ಷ ಸುಧೀರ್ ನೋಂಡ, ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ ಪೈಂತಿಮುಗೇರು, ಚೋಮ ನಾಯ್ಕ ಹೊಸಲಕ್ಕೆ, ಉದ್ಯಮಿ ಸಂತೋಷ್‌ ರೈ ಕೈಕಾರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ದೈವ ನರ್ತಕ ನೇಮು ಪರವ ಮಾಡಾವು, ತುಳುನಾಡ ರಂಗ ಬೊಳ್ಳಿ ರಂಗಭೂಮಿ ಹಾಗೂ ಚಲನಚಿತ್ರ ನಟ ರವಿ ರಾಮಕುಂಜ ಇವರಿಗೆ ಗಣ್ಯರ ಸಮ್ಮುಖದಲ್ಲಿ “ಸಹ್ಯಾದ್ರಿ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಕುಲ ಕಸುಬು ( ಬಟ್ಟಿ ಎಣಿಯುವುದು) ಬಟ್ಯ ಕೊರಗ ಇವರನ್ನು ಸನ್ಮಾನಿಸಲಾಯಿತು.
ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ದಕ್ಷಿಣ ಕನ್ನಡ ಜಿಲ್ಲೆ ಮಾಜಿ ಸಂಸದ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಇವರ ಅಧ್ಯಕ್ಷೆತಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್‌‌ ಯೂನಿಯನ್‌ ಅಧ್ಯಕ್ಷ ರಾಮ್‌ದಾಸ್ ಶೆಟ್ಟಿ, ಇವರಿಗೆ ಗಣ್ಯರ ಸಮ್ಮುಖದಲ್ಲಿ “ಸಹ್ಯಾದ್ರಿ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾ. ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸೀತಾರಾಮ ರೈ ಸಿ.. ಕೈಕಾರ, ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಿಕಿರಣ್ ರೈ ಮೊಡಪ್ಪಾಡಿ, ಪುತ್ತೂರು ಖ್ಯಾತ ವಕೀಲ ದುರ್ಗಾಪ್ರಸಾದ್ ರೈ ಕುಂಬ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಇದರ ಅಧ್ಯಕ್ಷ ನಿಖಿಲ್‌ ಆಚಾರ್ಯ ಕೈಕಾರ, ಗೌರವಾಧ್ಯಕ್ಷ ಪ್ರಜ್ವಲ್‌ ರೈ ತೋಟ, ಕಾರ್ಯದರ್ಶಿ ಹರೀಶ್‌ ಎಂ ಮಿನಿಪದವು, ಉಪಾಧ್ಯಕ್ಷ ನವೀನ್‌ ರೈ ಪನಡ್ಕ, ಜೊತೆ ಕಾರ್ಯದಶಿð ಸದಾಶಿವ ಆಚಾರ್ಯ ಕೈಕಾರ, ಖಜಾಂಚಿ ಅಭಿಷೇಕ ನಾಯ್ಕ ಹೊಸಲಕ್ಕೆ ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!