- Advertisement -
- Advertisement -
ಕಡಬ: ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಬೈಕ್ ಮಗುಚಿಬಿದ್ದು,ಕಡಬ ಸಮೀಪದ ಓಣಿಬಾಗಿಲು ನಿವಾಸಿ ಜೋಸ್ ಎಂಬವರ ಪತ್ನಿ ಕ್ಲಾರಮ್ಮ (60) ಎಂಬವರು ಮೃತಪಟ್ಟ ಘಟನೆ ನಡೆದಿದೆ.
ಬೈಕ್ ನಲ್ಲಿ ಸಂಚರಿಸುತ್ತಿರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು,ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು,ಪತಿ ಜೋಸ್,ಮಗ ಲಿಬಿನ್,ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
- Advertisement -