Friday, June 19, 2026
spot_imgspot_img
spot_imgspot_img

ಲಾಂಗ್ ತೋರಿಸಿ ಕಾಪರ್ ತಂತಿಗಳ ದರೋಡೆಗೈದಿದ್ದ ಐವರ ಬಂಧನ

- Advertisement -
- Advertisement -

ನೆಲಮಂಗಲ(ನ.5): ಲಾಂಗ್ ತೋರಿಸಿ ಫ್ಯಾಕ್ಟರಿಯಲ್ಲಿದ್ದ ಕಾಪರ್ ತಂತಿಗಳ ಬಂಡಲ್ ದರೋಡೆಗೈದಿದ್ದ ಐವರನ್ನ ನೆಲಮಂಗಲ ಉಪವಿಭಾಗ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ 25ರ ತಡರಾತ್ರಿ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯ ಸನ್ ಎಲೆಕ್ಟ್ರೋ ಸ್ಟಾಟಿಕ್ ಇಂಜಿನಿಯರಿಂಗ್ ಕಂಪನಿಯಲ್ಲಿ ದರೋಡೆ ಮಾಡಿದ್ದರು.ಎರಡು ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ ಹಿಡಿದು ಬಂದ ಐವರು ದರೋಡೆಕೋರರ ಗುಂಪು ಲಾಂಗ್ ತೋರಿಸಿ ಸೆಕ್ಯೂರಿಟಿ ಬಳಿಯಿದ್ದ ಕೀಗಳನ್ನ ಕಸಿದು ಕಂಪನಿ ಒಳಗಿದ್ದ ಸುಮಾರು 3.25 ಲಕ್ಷ ಮೌಲ್ಯದ ಕಾಪರ್ ತಂತಿಗಳ ಬಂಡಲ್, ಸ್ಟೇಟರ್ ಕಾಯಿಲ್​​ಗಳನ್ನ ಕದ್ದೊಯ್ದಿದ್ದರು.

ಅವರನ್ನು ಬಂಧಿಸುವಲ್ಲಿ ನೆಲಮಂಗಲ ಉಪವಿಭಾಗ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕೃಷ್ಣ, ನಾಗೇಶ್, ಸಂತೋಷ್, ಮಣಿಕಂಠ ಮತ್ತು ಕಿರಣ್ ಎಂದು ಗುರುತಿಸಲಾಗಿದೆ.

- Advertisement -

Related news

error: Content is protected !!