




ವಿಟ್ಲ: ಕಳೆದ ಮೂರು ವರ್ಷಗಳಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆ ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡವು ವಿನೂತನ ಶೈಲಿಯೊಂದಿಗೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾಂಸ್ಕೃತಿಕ ರಂಗದಲ್ಲಿ ವಿಭಿನ್ನತೆಯನ್ನು ಸಾರಲು ಮುಂದಾಗಿದೆ.
ಹಲವಾರು ವೇದಿಕೆಗಳಲ್ಲಿ ನೃತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಪ್ರಕಾರದ ಸಾಂಸ್ಕೃತಿಕ ವೈಭವಗಳನ್ನು ಪ್ರದರ್ಶಿಸಿ, ತನ್ನದೇ ವಿಶೇಷ ಶೈಲಿಯೊಂದಿಗೆ ಜನಮನ್ನಣೆ ಪಡೆದ ಕಲಾ ತಪಸ್ವಿ ತಂಡವು ಇದೀಗ ಹೊಸ ಸ್ಪರ್ಧೆಯೊಂದಿಗೆ ತಮ್ಮಮುಂದೆ ನಿಂತಿದೆ.
ಕುಣಿಯುವ ಮನಸ್ಸುಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಕಳೆದ ಜನವರಿ ತಿಂಗಳಲ್ಲಿ ಯಶಸ್ವಿಯಾಗಿ ಗೆಜ್ಜೆನಾದ-2025 ಎನ್ನುವ ಹೆಸರಿನಲ್ಲಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಿ,ಅಪಾರ ಕಲಾಭಿಮಾನಿಗಳ ಪ್ರಶಂಸೆಗೆ ತಂಡ ಪಾತ್ರವಾಗಿತ್ತು
ಇದೀಗ ಮತೊಮ್ಮೆ ಯಶಸ್ವಿ ಹೆಜ್ಜೆಯನ್ನಿಡಲು ಮುಂದಾಗಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡವು ಗೆಜ್ಜೆನಾದ -ಸೀಸನ್ 2 ಏಕವ್ಯಕ್ತಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಲು ಮುಂದಾಗಿದೆ.
ಈ ಸ್ಪರ್ಧೆಯನ್ನು ವೈಭವದಿಂದ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಸಮಿತಿಯನ್ನು ರಚಿಸಲಾಗಿದ್ದು, ಸ್ಪರ್ಧೆಯ ಸಂಚಾಲಕರಾಗಿ ಕಲಾತಪಸ್ವಿ ತಂಡದ ನಿರ್ದೇಶಕರಾದ ಜೈದೀಪ್ ಅಮೈ, ಗೌರವಾಧ್ಯಕ್ಷರಾಗಿ ತಾರಾನಾಥ್ ಬೋಳಿಗದ್ದೆ, ಅಧ್ಯಕ್ಷರಾಗಿ ಧನರಾಜ್ ಅಮೈ,ಕಾರ್ಯದರ್ಶಿಯಾಗಿ ಶ್ರೀಮತಿ ನಮಿತಾ ತಾರಾನಾಥ್ ಇವರು ಆಯ್ಕೆಯಾಗಿರುತ್ತಾರೆ.
ಗೆಜ್ಜೆನಾದ ಸೀಸನ್ -02ರಕಾರ್ಯಕಾರಿಣಿ ಸಮಿತಿ
ಸಂಚಾಲಕರಾಗಿ ಜೈದೀಪ್ ಅಮೈ , ಗೌರವಾಧ್ಯಕ್ಷರಾಗಿ ತಾರಾನಾಥ್ ಬೋಳಿಗದ್ದೆ, ಅಧ್ಯಕ್ಷರಾಗಿ ಧನರಾಜ್ ಅಮೈ, ಕಾರ್ಯದರ್ಶಿ ರಾಗಿ ಶ್ರೀಮತಿ ನಮಿತಾ ಬೋಳಿಗದ್ದೆ , ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ನಿರ್ಮಲ ಕಾರ್ಯಡಿ, ಶ್ರೀಮತಿ ಸುಶ್ಮಿತಾ ಕಾರ್ಯಡಿ, ಸಂಘಟನಾ ಕಾರ್ಯದರ್ಶಿಯಾಗಿ ಮನೋರಂಜನ್ ಅಮೈ, ವಿಶ್ವನಾಥ ಅಮೈ, ಅಲಂಕಾರ ಪ್ರಮುಖ್ರಾಗಿ ದಿನೇಶ್ ಅರ್ಕೆಚ್ಚಾರು, ಧನಂಜಯ ಕಾರ್ಯಡಿ, ಪವನ್ ಕಾರ್ಯಡಿ ಇವರನ್ನು ಆಯ್ಕೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚರಣ್ ಅಮೈ, ಚೈತ್ರೇಶ್ ದೇವಸ್ಯ, ಸಂಕೇತ್ ಮೂಡೈಮಾರು, ವ್ಯವಸ್ಥಾ ಪ್ರಮುಖ್ರಾಗಿ ಅಕ್ಷಯ್ ಅರ್ಕೆಚ್ಚಾರು, ಚರಣೇಶ್ ದೇವಸ್ಯ , ದೀಕ್ಷಿತ್ ಅರ್ಕೆಚ್ಚಾರು, ಚೈತ್ರ ದೇವಸ್ಯ, ಸಂಗ್ರಹ ಪ್ರಮುಖ್ರಾಗಿ ಜನಾರ್ಧನ ಕಾರ್ಯಡಿ, ಅಜಿತ್ ದೇವಸ್ಯ, ಸುಜನ್ ದೇವಸ್ಯ, ವಜ್ರೇಶ್ ಧರ್ಮನಗರ, ಜಾಲತಾಣ ಪ್ರಮುಖ್ರಾಗಿ ಕಿರಣ್ ಕಾರ್ಯಡಿ, ಕಿಶನ್ ಉರಿಮಜಲು, ಪ್ರಚಾರ ಪ್ರಮುಖ್ರಾಗಿ ಜಗದೀಶ ನೂಜಿ,ಜಯಶ್ರಿ ವಿಟ್ಲ, ಧನುಷ್ ಕಾರ್ಯಡಿ, ಮೋಹಿತ್ ರೆಂಜೆಮಾರು ಇವರನ್ನು ಆಯ್ಕೆ ಮಾಡಲಾಯಿತು.








