



ವಿಟ್ಲ: ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ನಿವಾಸಿ ಮಹಮ್ಮದ್ ಇಷ್ರಾದ್ ಕೆ.ಎ @ ಇರ್ಷಾದ್ (32) ಎಂದು ಗುರುತಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ಅಕ್ರ 26/ 2018 ಕಲಂ 447, 341,504,323,324,354,506 r.w 34 IPC ಪ್ರಕರಣದ ಆರೋಪಿ ಮಹಮ್ಮದ್ ಇಷ್ರಾದ್ ಎಂಬಾತನು ತಲೆ ಮರೆಸಿಕೊಂಡಿದ್ದು ನ್ಯಾಯಲಯವು c.c 1565/2023 ರಲ್ಲಿ ವಾರಂಟ್ ಹೊರಡಿಸಿರುವುದಾಗಿದೆ. ಆರೋಪಿಯನ್ನು ದಿನಾಂಕ 26-09-2025 ರಂದು ಬಂಟ್ವಾಳ ತಾಲೂಕಿನ ಅಳಿಕೆ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ Cr 25/2019 U.s 447,326,324,120(b),307,109,201,34 IPC & 3,25 arms act , ಬಂಟ್ವಾಳ ನಗರ ಠಾಣೆಯಲ್ಲಿ Cr no. 103/2020 u/s 8(c) 20(b) NDPS ACT , ಪುತ್ತೂರು ಗ್ರಾಮಾಂತರ ಠಾಣೆಯಲ್ಲಿCr no 127/ 2013 u/s 457,380 ipc ಯಂತೆ ಪ್ರಕರಣಗಳು ದಾಖಲಾಗಿತ್ತದೆ.








