Tuesday, June 23, 2026
spot_imgspot_img
spot_imgspot_img

ಬಂಟ್ವಾಳ: ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಆರೋಪ; ಬಾಲಕನನ್ನು ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ನ್ಯಾಯಾಲಯದಿಂದ ಆದೇಶ

- Advertisement -
- Advertisement -

ಬಂಟ್ವಾಳ: ಬಾಲಕನೋರ್ವ ರಸ್ತೆಯಲ್ಲಿ ರಾತ್ರಿ ವೇಳೆ ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಕೃತ್ಯ ಎಸಗಿದ್ದು, ನ್ಯಾಯಾಲಯವು ಆರೋಪಿಯನ್ನು ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶ ಮಾಡಿರುತ್ತಾರೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 95/2025, U/s: 74 BNS-2023 ಪ್ರಕರಣದಲ್ಲಿ ಆರೋಪಿ ಅಪರಿಚಿತ ಸ್ಕೂಟರ್ ಸವಾರನು ರಸ್ತೆಯಲ್ಲಿ ರಾತ್ರಿ ವೇಳೆ ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಕೃತ್ಯ ಎಸಗಿದ್ದು, ಆರೋಪಿತನ ಪತ್ತೆ ಬಗ್ಗೆ ತನಿಖೆ ನಡೆಸಲಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ನಿವಾಸಿ ತನ್ನ ಪೋಷಕರ ಜೊತೆ ವಾಸವಾಗಿರುವ 13 ವರ್ಷದ ಬಾಲಕನು ಈ ಕೃತ್ಯವನ್ನು ಎಸಗಿರುವುದು ಲಭ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ.

ಅದರಂತೆ ಆ.26ರಂದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಆತನ ಸ್ವಗೃಹದಲ್ಲಿ ತಾಯಿಯ ಸಮಕ್ಷಮ ವಿಚಾರಿಸಿ ಹೇಳಿಕೆ ಪಡೆದು, ಬಾಲನ್ಯಾಯ ಮಂಡಳಿ ಮಂಗಳೂರುರವರ ಸಮಕ್ಷಮಕ್ಕೆ ಆ.26ರಂದು ಹಾಜರುಪಡಿಸಲಾಗಿದ್ದು, ಮಾನ್ಯ ಬಾಲ ನ್ಯಾಯಾಲಯವು ಬಾಲಕನನ್ನು ಸೆ.2.09.2025 ವರೆಗೆ ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶ ಮಾಡಿರುತ್ತಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

- Advertisement -

Related news

error: Content is protected !!