ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಾಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರರಿಯವರಿಗೆ ಮಹಾ ಸಭೆಯಲ್ಲಿ ಸನ್ಮಾನ





ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಹಲವಾರು ವರ್ಷಗಳಿಂದ ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿಯನ್ನು ಹೊಂದಿದ್ದು, ಈ ಎಲ್ಲಾ ಸಾಧನೆಗಳನ್ನು ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ದಿನಾಂಕ 30-08-2025 ರಂದು ನಡೆದ ಬ್ಯಾಂಕ್‌ನ ಮಹಾ ಸಭೆಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹೆಚ್.ಜಗನ್ನಾಥ್ ಸಾಲಿಯಾನ್, ಉಪಾಧ್ಯಾಕ್ಷ ಮನೋರಂಜನ್ ಕೆ ಆರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್.ಕೆ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಿದರು.
2024-25 ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ತನ್ನ ಕಾರ್ಯ ದಕ್ಷತೆಯನ್ನು ಮೆರೆದು ದಾಖಲೆಯ ರೂ. 864.42 ಕೋಟಿಗಳ ವ್ಯವಹಾರವನ್ನು ಮಾಡಿರುತ್ತದೆ. ರೂ. 134.73 ಕೋಟಿ ರೂಪಾಯಿಗಳ ಠೇವಣಿ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ. 104.13 ಕೋಟಿ, ಸಾಲ ವಸೂಲಾತಿ ಪ್ರಮಾಣ ಶೇಕಡಾ 93.20 ರಷ್ಟಿದ್ದು, ವರದಿ ವರ್ಷದಲ್ಲಿ ರೂ. 3.45 ಕೋಟಿ ಲಾಭಗಳಿಸಿದ್ದು, ಪ್ರಸ್ತುತ ಬ್ಯಾಂಕಿನ ದುಡಿಯುವ ಬಂಡವಾಳ 164.93 ಕೋಟಿಗಳಾಗಿರುತ್ತದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ದಯಾನಂದ ಆಳ್ವ ಕೆ ಮತ್ತು ವಿಶ್ವನಾಥ. ಎಂ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಹೆಚ್ ಎನ್ ರಮೇಶ್ ಇವರು ಉಪಸ್ಥಿತರಿದ್ದರು.








