




ಕೆಲಿಂಜ: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರ ವೀರಕಂಭ ವತಿಯಿಂದ ಶಕ್ತಿಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ ಕೆಲಿಂಜ ಶ್ರೀನಿಕೇತನ ಸಭಾ ಭವನದಲ್ಲಿ ನಡೆಯಿತು.
ವಿರಕಂಭ ಗ್ರಾಮದ ಹಿರಿಯರೂ ಪಕ್ಷದ ಪ್ರಮುಖರೂ ಆದ ಬಾಬು ಶೆಟ್ಟಿ ಕೆಲಿಂಜ, ಬಾಬು ಮೂಲ್ಯ ನೆಕ್ಕರಾಜೆ, ಲಕ್ಷ್ಮಣ ಪೂಜಾರಿ ಬಾಯಿಲ, ಶ್ರೀಮತಿ ಪ್ರೇಮ ಆಚಾರ್ಯ, ಜನಾರ್ಧನ್ ಸಾಲ್ಯಾನ್ ಹಿರಿಯರು ಸೇರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಕ್ತಿ ಕೇಂದ್ರ ಪ್ರಮುಖ್ ಜಯ ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಂಡಲ ಉಪಾಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಮಂಡಲ ಕಾರ್ಯದರ್ಶಿ ಸನತ್ ಕುಮಾರ್, ಮಾಣಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ, ಸಂಚಾಲಕ ಸಂದೀಪ್ ಪೂಜಾರಿ, ಚಂದ್ರಶೇಖರ್ ಬಾಯಿಲ, ಸೊಸೈಟಿ ನಿರ್ದೇಶಕ ಕೊರಗಪ್ಪ ಗೌಡ, ಮೂರನೇಯ ಅವಧಿಯ ವಿಕಾಸಿತ ಭಾರತದ ಅಮೃತ ಕಾಲ ಮತ್ತು ನಮ್ಮ ಸಕ್ರಿಯತೆ ಕಾರ್ಯಗಾರ ಮತ್ತು ಮಾಹಿತಿಯನ್ನು ರಾಜ್ಯ ನಾಯಕಿ ಶ್ರೀಮತಿ ಸುಲೋಚನಾ ಜಿ ಕೆ ಭಟ್ ನಡೆಸಿ ಕೊಟ್ಟರು. ವೇದಿಕೆಯಲ್ಲಿ ಮಾಜಿ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರೇಮ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಗಾರದ ಮೊದಲ ಅವಧಿಯ “ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ”ಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ನೀಡಿದರು.
ಎರಡನೇ ಅವಧಿಯ ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ ಈ ಬಗ್ಗೆ ಮಾಹಿತಿ ಮತ್ತು ಕಾರ್ಯಗಾರವನ್ನು ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ನಡೆಸಿಕೊಟ್ಟರು.
ಮೂರನೇಯ ಅವಧಿಯ ವಿಕಾಸಿತ ಭಾರತದ ಅಮೃತ ಕಾಲ ಮತ್ತು ನಮ್ಮ ಸಕ್ರಿಯತೆ ಕಾರ್ಯಗಾರ ಮತ್ತು ಮಾಹಿತಿಯನ್ನು ರಾಜ್ಯ ನಾಯಕಿ ಶ್ರೀಮತಿ ಸುಲೋಚನಾ ಜಿ ಕೆ ಭಟ್ ನಡೆಸಿಕೊಟ್ಟರು.
ಅಭ್ಯಾಸ ವರ್ಗದ ಕೊನೆಯ ಭಾಗವಾದ ಸಮಾರೋಪ ಸಮಾರಂಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಮಾತನಾಡಿ, ಅಭ್ಯಾಸ ವರ್ಗದ ಸಂಪೂರ್ಣ ಸಾರವನ್ನು ಸವಿವಾರವಾಗಿ ತಿಳಿಸಿ ಬಿಜೆಪಿ ಸಂಘಟನಾ ಉದ್ದೇಶವನ್ನು ಕಾರ್ಯಕರ್ತರ ಮನ ಮುಟ್ಟಿಸಿದರು.ಜಿಲ್ಲಾ ಬಿಜೆಪಿ ನಾಯಕ ಸಂದೇಶ್ ಶೆಟ್ಟಿ ಮಾತನಾಡಿ ಬೂತ್ ಬಲಿಷ್ಠತೆ, ಪಕ್ಷದ ಸಿದ್ದಾಂತ ಮುಂದಿನ ಚುನಾವಣಾ ಸಿದ್ಧತೆ, ಕಾರ್ಯಕರ್ತರಲ್ಲಿ ಪರಸ್ಪರ ಅನ್ಯೋನ್ಯತೆ ಈ ಬಗ್ಗೆ ಸಮಾಲೋಚನ ಮಾಹಿತಿ ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಕ್ತಿ ಕೇಂದ್ರ ಪ್ರಮುಖ್ ಜಯಪ್ರಸಾದ್ ವಹಿಸಿದ್ದು ವೇದಿಕೆಯಲ್ಲಿ ಮಾಣಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ಸಂಚಾಲಕ ಸಂದೀಪ್, ಸಹ ಸಂಚಾಲಕ ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸೊಸೈಟಿ ನಿರ್ದೇಶಕರು, ಪಕ್ಷದ ಪ್ರಮುಖರು, ಮಹಿಳಾ ಪ್ರಮುಖರು ಹಿರಿಯ, ಕಿರಿಯ ಕಾರ್ಯಕರ್ತರು ಹಾಗೂ ಬೂತ್ ಸಮಿತಿ ಸದಸ್ಯರು ಭಾಗವಹಿಸಿದರು.
ಪಂಚಾಯತ್ ಸದಸ್ಯ ಜಯ ಪ್ರಸಾದ್ ಸ್ವಾಗತಿಸಿ ಬಂಟ್ವಾಳ ಮಂಡಲ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕ ಪ್ರಕಾಶ್ ಪೂಜಾರಿ ವಂದಿಸಿದರು. ಪ್ರಶಾಂತ್ ಪಾಲ್ತಿಮಾರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.








