Tuesday, July 21, 2026
spot_imgspot_img
spot_imgspot_img

ಧರ್ಮನಗರ: ಸಿದ್ದಿವಿನಾಯಕ ಯುವಕ ಮಂಡಲ (ರಿ) ಧರ್ಮನಗರ-ಕಂಬಳಬೆಟ್ಟು ಇದರ ಹಿರಿಮೆಗೆ ಮತ್ತೊಂದು ಗರಿಮೆ

- Advertisement -
- Advertisement -

*ಸಿದ್ದಿವಿನಾಯಕ ಯುವಕ ಮಂಡಲದ ಸಮಾಜ ಸೇವೆಗೆ 2025-26 ನೇ ಸಾಲಿನ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ"

ಸಮಾನ ಮನಸ್ಕ ಯುವಕರು ಸೇರಿ ಕಟ್ಟಿ ಬೆಳೆಸಿದ ಸಂಘಟನೆ ಸಿದ್ದಿವಿನಾಯಕ ಯುವಕ ಮಂಡಲ (ರಿ) ಧರ್ಮನಗರ-ಕಂಬಳಬೆಟ್ಟು ಇದರ ಸಾಧನೆಗಾಗಿ ಈ ಬಾರಿಯ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹಲವಾರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡ ಸಿದ್ದಿವಿನಾಯಕ ಯುವಕ ಮಂಡಲ (ರಿ) ಧರ್ಮನಗರ-ಕಂಬಳಬೆಟ್ಟು ಇದರ ಸೇವೆಗೆ ಮತ್ತೊಂದು ಗರಿಮೆ ಲಭಿಸಿದೆ.

ಸಮಾಜಮುಖಿ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸುವ ಪ್ರೆರೇಪಣೆಯೊಂದಿಗೆ 2021 ರಲ್ಲಿ 13 ಜನ ಸದಸ್ಯರನ್ನೊಳಗೊಂಡು ಸ್ಥಾಪನೆಗೊಂಡ ಸಿದ್ದಿವಿನಾಯಕ ಯುವಕ ಮಂಡಲ (ರಿ) ಧರ್ಮನಗರ-ಕಂಬಳಬೆಟ್ಟು ಸಂಘಟನೆ ಮುಂದಿನ ದಿನಗಳಲ್ಲಿ ಹಲವಾರು, ಸಾಮಾಜಿಕ, ಧಾರ್ಮಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ಮಂದುವರೆದ ಯುವಕ ಮಂಡಲ ಅತೀ ಕಡಿಮೆ ಅವಧಿಯಲ್ಲಿ ಉತ್ತಮ ಸಮಾಜ ಮುಖಿ ಕಾರ್ಯಗಳ ಮೂಲಕ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಮೂಲಕ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು. ದ ಕ ಜಿಲ್ಲೆಯ ಬಂಟ್ವಾಳ ತಾಲೂಕು ಧರ್ಮನಗರ ಕಂಬಳಬೆಟ್ಟು ಇಲ್ಲಿ ಮೂರು ಗ್ರಾಮಗಳ 184 ಯುವಕರನ್ನು ಒಗ್ಗೂಡಿಸಿಕೊಂಡು ಸಮಾಜದ ಅದೆಷ್ಟೋ ಅಶಕ್ತ ಕುಟುಂಬಗಳ ಪಾಲಿಗೆ ಬೆಳಕಾಗಿ ನಿಂತಿದೆ. ಅನಾರೋಗ್ಯ ಪೀಡಿತರಿಗೆ ಸಹಾಯಧನ, ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಹಲವಾರು ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡುತ್ತಾ ಬಂದಿದೆ. ಯುವಕ ಮಂಡಲದ ಹಿರಿಮೆಗೆ ಮತ್ತೊಂದು ಗರಿಮೆ ಎಂಬಂತೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಯುವಕ ಮಂಡಲದ ಸಮಾಜ ಸೇವೆಗೆ ಸಿಕ್ಕ ಗೌರವ.

- Advertisement -

Related news

error: Content is protected !!