



ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ಅನುಷ್ಕಾ ಶೆಟ್ಟಿ ಮತ್ತು ವಿಕ್ರಮ್ ಪ್ರಭು ಪಾತ್ರದ ‘ಘಾಟಿ’ ಸಿನಿಮಾ ವಿಶ್ವಾದ್ಯಾಂತ ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತೆಲುಗು-ತಮಿಳು ಚಿತ್ರರಂಗದಲ್ಲಿ ಸುಮಾರು ದಶಕದ ಕಾಲ ನಂಬರ್ 1 ಆಗಿ ಮೆರೆದ ಅನುಷ್ಕಾ ಶೆಟ್ಟಿ ‘ಬಾಹುಬಲಿ’ ಸಿನಿಮಾದ ಬಳಿಕ ಚಿತ್ರರಂಗದಿಂದ ನಿಧಾನಕ್ಕೆ ದೂರ ಸರಿದಿದ್ದರು. ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿರುವ ಅನುಷ್ಕಾ ಶೆಟ್ಟಿ ಇದೀಗ ‘ಘಾಟಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರದ್ದು ಬಲು ಪವರ್ಫುಲ್ ಪಾತ್ರ.

ಘಾಟಿ ತೆಲುಗು ನಾಟಕ ಥ್ರಿಲ್ಲರ್ ಚಿತ್ರವಾಗಿದ್ದು, ಕ್ರಿಶ್ ಜಾಗರ್ಲಮುಡಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ವಿಕ್ರಮ್ ಪ್ರಭು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗವೆಲ್ಲಿ ವಿದ್ಯಾ ಸಾಗರ್ ಸಂಗೀತ ಸಂಯೋಜಿಸಿದ್ದಾರೆ, ಮನೋಜ್ ರೆಡ್ಡಿ ಕಟಾಸಾನಿ ಛಾಯಾಗ್ರಹಣ ಮಾಡಿದ್ದಾರೆ ಮತ್ತು ಚಾಣಕ್ಯ ರೆಡ್ಡಿ ತೂರುಪು ಸಂಕಲನ ಮಾಡಿದ್ದಾರೆ.
ಘಾಟಿ’ ಸಿನಿಮಾ ಒಂದು ಸಮುದಾಯದವರ ಕತೆ. ಬ್ರಿಟೀಷರ ಕಾಲದಲ್ಲಿ ಬೆಟ್ಟಗಳನ್ನು ಒಡೆದು ರಸ್ತೆಗಳನ್ನು ಮಾಡಿದವರು ಈಗ ಗಾಂಜಾ ಸ್ಮಗ್ಲಿಂಗ್ ಮಾಡುತ್ತಿದ್ದಾರೆ. ಅವರನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಮಾಫಿಯಾ ಡಾನ್ಗಳು. ಅದೇ ಸಮುದಾಯದ ಅನುಷ್ಕಾ ಶೆಟ್ಟಿ ಹೇಗೆ ಮಾಫಿಯಾಗಳ ವಿರುದ್ಧ ತಿರುಗಿ ತನ್ನವರನ್ನು ಕಾಪಾಡಿಕೊಳ್ಳುತ್ತಾಳೆ ಎಂಬುದು ಸಿನಿಮಾದ ಕತೆ ಎಂದು ಟ್ರೈಲರ್ ಸೂಚ್ಯವಾಗಿ ಹೇಳುತ್ತಿದೆ.









