Wednesday, July 22, 2026
spot_imgspot_img
spot_imgspot_img

2025-26ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ “ಉತ್ತಮ ಶಿಕ್ಷಕ ಪ್ರಶಸ್ತಿ”ಗೆ ಜಗದೀಶ್ ರೈ ನಡುವಳಚ್ಚಿಲ್ ಆಯ್ಕೆ

- Advertisement -
- Advertisement -

ತುಂಬೆ: ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು, ತಾಲೂಕು ಶಾಖೆ, ಬಂಟ್ವಾಳ 2025-26ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ “ಉತ್ತಮ ಶಿಕ್ಷಕ ಪ್ರಶಸ್ತಿ”ಗೆ ಜಗದೀಶ್ ರೈ ನಡುವಳಚ್ಚಿಲ್ ರವರು ಆಯ್ಕೆಯಾಗಿದ್ದಾರೆ.

ವೀರಕಂಬ ಗ್ರಾಮದ ನಡುವಳಚಿಲ್ ನಿವಾಸಿಯಾದ ಜಗದೀಶ್ ರೈರವರು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿ.ಎ ಪ್ರೌಢ ಶಾಲೆ ತುಂಬೆಯಲ್ಲಿ ಹಲವು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ.

ಸಾವಿರಾರು ಪ್ರತಿಭೆಗಳನ್ನು ಪರಿಚಯಿಸಿ ನೂರಾರು ವಿದ್ಯಾರ್ಥಿಗಳನ್ನು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ” ಜಗದೀಶ್ ರೈ ನಡುವಳಚ್ಚಿಲ್ ” ಅವರನ್ನು ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣೆಯ ಸಮಿತಿಯು ಇವರ ಸಾಧನೆಗೆ ತಕ್ಕಂತೆ ಬಂಟ್ವಾಳ ತಾಲೂಕು”ಉತ್ತಮ ಶಿಕ್ಷಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.

- Advertisement -

Related news

error: Content is protected !!