Wednesday, July 22, 2026
spot_imgspot_img
spot_imgspot_img

2024-25ನೇ ಸಾಲಿನ ಭರತನಾಟ್ಯ ಜ್ಯೂನಿಯರ್ ಪರೀಕ್ಷೆ-ಸಮನ್ವಿ ಆರ್ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

- Advertisement -
- Advertisement -

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ನಡೆಸಿದ 2024-25ನೇ ಸಾಲಿನ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಸಮನ್ವಿ ಆರ್. ಇವರು ಶೇಕಡಾ 95.25 ಫಲಿತಾಂಶದೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಇವರು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾಗಿರುವ ರಮೇಶ್ ಗೇರುಕಟ್ಟೆ ಹಾಗೂ ಯೆನಪೋಯ ಕಾಲೇಜ್ ಆಫ್ ನರ್ಸಿಂಗ್, ನರಿಂಗಾನದಲ್ಲಿ ಉಪನ್ಯಾಸಕಿಯಾಗಿರುವ ಆಶಾಲತಾ ದಂಪತಿಗಳ ಪುತ್ರಿಯಾಗಿದ್ದು ವಿಟ್ಲದ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ.

ಇವರು ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇದರ ವಿಟ್ಲ ಶಾಖೆಯ ವಿದ್ಯಾರ್ಥಿನಿಯಾಗಿದ್ದು ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಇವರ ಶಿಷ್ಯೆ.

- Advertisement -

Related news

error: Content is protected !!