


ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-2025ನೇ ಸಾಲಿನ ಮಹಾಸಭೆ ನಡೆಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ರೂಪೇಶ್ ರೈ ಅಳಿಕೆಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ 2024-2025ನೇ ಸಾಲಿನಲ್ಲಿ 124.40 ಕೋಟಿ ವ್ಯವಹಾರವನ್ನು ನಡೆಸಿ 50.14ಲಕ್ಷ ಲಾಭವನ್ನು ಗಳಿಸಿದ್ದು, ಡಿವಿಡೆಂಟ್ ಶೇ.9ರಷ್ಟು ನೀಡಲಾಗುವುದು. ಕೃಷಿ ಸಲಕರಣೆಗಳ ವ್ಯವಹಾರದಲ್ಲಿ 4.87 ಲಕ್ಷ ಲಾಭವನ್ನು ಗಳಿಸಿದೆ. ರೈತರಿಗೆ ಅಗತ್ಯವಾದ ರಸಗೊಬ್ಬರ ಮಾರಾಟಕ್ಕೆ ಮುಂದಿನ ದಿನದಲ್ಲಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು
1805ಎ ತರಗತಿ ಸದಸ್ಯರನ್ನು ಹೊಂದಿ, 2.14ಕೋಟಿ ಪಾಲುಬಂಡವಾಳವನ್ನು ಹೊಂದಿ ಲೆಕ್ಕಪರಿಶೋಧನೆಯಲ್ಲಿ ಎ ವರ್ಗವನ್ನು ಕಾಯ್ದಿರಿಸಿಕೊಂಡಿದೆ. ಸಂಘದ ಠೇವಣಾತಿ 17.13ಶೇ. ವೃದ್ಧಿಯಾಗಿ 25.20ಕೋಟಿ ಸಂಗ್ರಹವಾಗಿದೆ. ಯಶಸ್ವಿನಿ ಯೋಜನೆಯಲ್ಲಿ 855ಸದಸ್ಯರು ನೋಂದಣಿಗೊಂಡಿದ್ದಾರೆ. ಸಂಘ 46 ನವೋದಯ ಸ್ವಸಹಾಯ ಗುಂಪು ಮತ್ತು11 ಇತರ ಸ್ವಸಹಾಯ ಗುಂಪುಗಳನ್ನು ಹೊಂದಿದೆ ಎಂದರು.
ಶೈಕ್ಷಣಿಕವಾಗಿ ಸಾಧನೆ ಮಾಡಿದ ಗಗನ್ ಶೆಟ್ಟಿ, ಆದಿತ್ಯರಾಮ ಶರ್ಮ, ಭುವಿತ, ಅಕ್ಷಯರಾಮ ಶರ್ಮ, ತನುಶ್ರೀ ಆರ್., ರೇಶ್ಮ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ರೈ ಬಿ. ವರದಿ ವಾಚಿಸಿದರು.


ಸಭೆಯಲ್ಲಿ ಉಪಾಧ್ಯಕ್ಷ ಭಾಸ್ಕರ ಮಡಿಯಾಲ, ನಿರ್ದೇಶಕರಾದ ಯಂ. ಚಂದ್ರನಾಥ ಆಳ್ವ, ಕಾನ ಈಶ್ವರ ಭಟ್, ವಸಂತ ಎ., ಆನಂದ ಶೆಟ್ಟಿ, ಸೀತಾರಾಮ ಶೆಟ್ಟಿ ಎಂ., ಮಹೇಶ್ ಅಳಿಕೆ, ಸುಂದರ ನಾಯ್ಕ ಬಿ., ಚೆನ್ನಪ್ಪ ಅಳಿಕೆ, ಗೀತಲತಾ ಟಿ. ಶೆಟ್ಟಿ, ಸರಸ್ವತಿ, ಸಹಕಾರ ಸಂಘಗಳ ವಲಯ ಮೇಲ್ವಿಚಾರಕ ಯೋಗೀಶ್ ಎಚ್. ಉಪಸ್ಥಿತರಿದ್ದರು.









