



ವಿಟ್ಲ: ಕಡಂಬು ಹಾಲು ಉತ್ಪಾದಕರ ಸಹಕಾರ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಆವರಣದಲ್ಲಿ ನಡೆಯಿತು.
ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾದಿಕಾರಿ ವಿದ್ಯಾ ಸುನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಸೌಲಭ್ಯ ಮತ್ತು ಹೈನುಗಾರಿಯಿಂದ ರೈತರು ಹೇಗೆ ಲಾಭ ಗಳಿಸಬಹುದು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ರಾಘವ ಗೌಡ ಬನ ಸ್ವಾಗತಿಸಿ ವಾರ್ಷಿಕ ವರದಿ ವಾಚುಸಿ, ಸಂಘವು ಪ್ರಸಕ್ತ ವರ್ಷ ಒಟ್ಟು ರೂ 2,54,66,825.80 ವ್ಯವಹಾರ ನಡೆಸಿ ಒಟ್ಟು ರೂ 6,60,024.50 ಲಾಭ ಗಳಿಸಿರುತ್ತದೆ. ಸದಸ್ಯರಿಗೆ ಶೇಕಡಾ 20 ಡಿವಿಡೆಂಡ್ ನೀಡಲಾಗುತ್ತದೆ ಎಂದರು. ಸಂಘದ ಅಧ್ಯಕ್ಷ ಪ್ರದೀಪ್ ಗೌಡ ಅಧ್ಯಕ್ಷತೆ ವಹಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ತಮ್ಮಯ್ಯ ನಿರ್ದೇಶಕ ರಮೇಶ್ ಜಿ, ಫೆಲಿಕ್ಸ್ ಮಿನೇಜಸ್, ಪೂವಪ್ಪ ಗೌಡ, ಹೂವಯ್ಯ ಶೆಟ್ಡಿಗಾರ್, ಧನಂಜಯ ಕುಮಾರ್, ಲಕ್ಷ್ಮಣ ಶೆಟ್ಟಿಗಾರ್, ಉಮಾವತಿ, ಪುಷ್ಪಾ ಮತ್ತು ವಿನೋದ ಹಾಗೂ ಹಾಲು ಪರೀಕ್ಷಕ ಜಯಾನಂದ ಬನ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿ ಪ್ರಥಮ ತೇಜಶ್ರಿ ಬನ, ದ್ವಿತೀಯ ಪ್ರದೀಪ ಗೌಡ ಮತ್ತು ತೃತೀಯ ಉಮಾವತಿ ಇವರಿಗೆ ಬಹುಮಾನ ಮತ್ತು ಹಾಲು ಹಾಕುವ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.








