Saturday, September 5, 2026
spot_imgspot_img
spot_imgspot_img

ಯಲ್ಲಾಪುರ: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ನೀರುಪಾಲು

- Advertisement -
- Advertisement -

ಯಲ್ಲಾಪುರ: ಯಲ್ಲಾಪುರ ತಾಲೂಕಿನ ಮಲವಳ್ಳಿ ಸಮೀಪದ ಕಾನೂರು ಜಲಪಾತದಲ್ಲಿ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ತಂಡದಲ್ಲಿ ಓರ್ವ ನೀರುಪಾಲಾದ ಘಟನೆ ಮಂಗಳವಾರ ನಡೆದಿದೆ.ನೀರುಪಾಲಾದ ಯುವಕ ಧಾರವಾಡದ ಸೋಹಿಲ್ ಸೈಯದಾಲಿ ಶೇಖ್ (21) ಎಂದು ತಿಳಿದು ಬಂದಿದೆ.

ಹಳಿಯಾಳದ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾನೂರು ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ನೀರಿನಲ್ಲಿ ಈಜಲು ಹೋದಾಗ ಸೋಹಿಲ್ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದಾನೆ ಎಂದು‌ ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಆತನ ಶೋಧ ಕಾರ್ಯದಲ್ಲಿ ನಿರತರಾಗಿದ್ದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!