- Advertisement -
- Advertisement -



ಬಂಟ್ವಾಳ ಸಜೀಪ ಮೂಡ ಗ್ರಾಮದ ನಿವಾಸಿ ಎ ಜೀವನ್ ಆಳ್ವ (53) ರವರು ಕೃಷಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 25.09.2025 ರಂದು ರಾತ್ರಿ, ಬಂಟ್ವಾಳ ತುಂಬೆಯಲ್ಲಿರುವ ತಾಯಿಯ ತೋಟದಿಂದ, ಯಾರೋ ಇಬ್ಬರು ಕಳ್ಳರು ಸುಮಾರು 34 ತೆಂಗಿನ ಕಾಯಿಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಕದ್ದು ತೆಗೆದುಕೊಂಡು ಹೋಗುವ ಸಮಯ ಸ್ಥಳೀಯರು ಹಿಡಿದು ಪಿರ್ಯಾದಿದಾರರಿಗೆ ಕರೆ ಮಾಡಿ ತಿಳಿಸಿರುತ್ತಾರೆ.
ಸ್ಥಳಕ್ಕೆ ಪಿರ್ಯಾದಿದಾರರು ಬಂದು ನೋಡಿದಾಗ ಇಬ್ಬರು ಅಪರಿಚಿತರು ಸುಮಾರು 1000 ರೂ/-ಮೌಲ್ಯದ ತೆಂಗಿನಕಾಯಿಗಳನ್ನು ಚೀಲದಲ್ಲಿ ತುಂಬಿಸಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:145/2025, ಕಲಂ: 303(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








