- Advertisement -
- Advertisement -



ವಿಟ್ಲ: ಕಾರ್ಯಾಡಿ ನಿವಾಸಿ ಸೂರ್ಯ ನಾರಾಯಣರವರು ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಲತಾ, ಮಗ ಸುಮಿತ್, ಮಗಳು ಲಹರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರು ಭಾರತೀಯ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು.ಸೂರ್ಯನಾರಾಯಣರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮನಗರದ ಶಾಖೆ ಆರಂಭದಿಂದ ಇಲ್ಲಿ ನಡೆದು ಬಂದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಇತರ ಎಲ್ಲಾ ಕಾರ್ಯಕರ್ತರಿಗೆ ಮಾದರಿಯಾಗಿದ್ದರು. ಸಂಘದ ತೃತೀಯ ವರ್ಷದ ಶಿಕ್ಷಣವನ್ನು ಮುಗಿಸಿ ಇಡ್ಕಿದು ಮಂಡಲ ಕಾರ್ಯವಹರಾಗಿ ತನ್ನ ಸೇವೆ ಸಲ್ಲಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ನಾಳೆ 27-9- 2025 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಾಡಿಯಲ್ಲಿ ನಡೆಸುವುದಾಗಿ ಮನೆಯವರು ತಿಳಿಸಿದ್ದಾರೆ.
- Advertisement -








