Friday, June 5, 2026
spot_imgspot_img
spot_imgspot_img

ಬೆಳ್ತಂಗಡಿ: ಮನೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

- Advertisement -
- Advertisement -

ಬೆಳ್ತಂಗಡಿ: ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿ ಹರೀಶ್ ಎಂಬವರ ಮನೆಯಲ್ಲಿ ಬೆಂಕಿ ಅನಾಹುತ ಉಂಟಾಗಿ ಮನೆಗೆ ಭಾರಿ ಹಾನಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಘಟನೆಯ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ. ಹರೀಶ್ ಅವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಬೇರೆಡೆ ತೆರಳಿದ್ದರು. ಪತ್ನಿ ಹಾಗೂ ಒಬ್ಬಳು ಮಗಳು ತವರು ಮನೆಗೆ ಹೋಗಿದ್ದರು. ಇನ್ನಿಬ್ಬರು ಮಕ್ಕಳು ಮನೆಯಲ್ಲಿ ಇದ್ದರು. ಅವರು ಸಂಜೆಯ ವೇಳೆ ಪಕ್ಕದ ಮನೆಗೆ ಹೋಗಿದ್ದರು. ಬಳಿಕ ರಾತ್ರಿಯ ಆಗುತ್ತಿದ್ದಂತೆಯೇ ಬೆಂಕಿ ಅನಾಹುತ ಉಂಟಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಮನೆಗೆ ಬೆಂಕಿ ಹೇಗೆ ತಗುಲಿದೆ ಎಂಬುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಹಂಚಿನ ಮೇಲ್ಬಾವಣಿಯ ಮನೆ ಬಹುತೇಕ ಬೆಂಕಿಗೆ ಆಹುತಿಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!