Sunday, September 6, 2026
spot_imgspot_img
spot_imgspot_img

ಗಾಂಜಾ ಮಾರಾಟ : ಇಬ್ಬರು ಬಂಧನ

- Advertisement -
- Advertisement -

ಶಿವಮೊಗ್ಗ : ನ್ಯಾಯಾಲಯ  ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಿದೆ.ಶಿವಮೊಗ್ಗ  ಸಾಗರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  04-08-2021 ರಂದು ನಡೆದ ಪ್ರಕರಣ ಇದಾಗಿದೆ. ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಅಂದಿನ ಇನ್​ಸ್ಪೆಕ್ಟರ್ ಅಶೋಕ್ ಕುಮಾರ್  ನೇತೃತ್ವದ ತಂಡ ದಾಳಿ ನಡೆಸಿತ್ತು.

ಈ ವೇಳೆ  ಒಟ್ಟು 1 ಕೆ.ಜಿ 60 ಗ್ರಾಂ ಒಣ ಗಾಂಜಾ, ₹800 ರೂಪಾಯಿ ಕ್ಯಾಶ್​ ಹಾಗೂ  ಮಾರುತಿ ಓಮಿನಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ  ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ಪಿಎಸ್ಐ ಸಾಗರ್ ಕರ್ ಚಾರ್ಜ್​ ಶೀಟ್​ ಸಲ್ಲಿಸಿದ್ದರು. ಈ ಸಂಬಂಧ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ ದಲ್ಲಿ ವಿಚಾರಣೆ ನಡೆದಿತ್ತು.

- Advertisement -

Related news

error: Content is protected !!