Thursday, June 25, 2026
spot_imgspot_img
spot_imgspot_img

ಪುತ್ತೂರು: ಅಪರಿಚಿತರಿಂದ ಹಲ್ಲೆ: ಪ್ರಕರಣ ದಾಖಲು

- Advertisement -
- Advertisement -

ಕೆಮ್ಮಾಯಿ ನಿವಾಸಿ ಪ್ರವೀಣ್ ಎಂಬವರಿಗೆ ಅಪರಿಚಿತ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುತ್ತೂರಿನ ಕೆಮ್ಮಾಯಿ ನಿವಾಸಿ ಪ್ರವೀಣ್ ತನ್ನ ಅಕ್ಕನ ಕಾರಿನಲ್ಲಿ ಕಾವೇರಿಕಟ್ಟೆ ಬಳಿ ಬಂದು ಅಲ್ಲಿ ತಿಂಡಿ ಪಾರ್ಸೆಲ್‌ ತೆಗೆದುಕೊಳ್ಳುತ್ತಿದ್ದ ಸಂದರ್ಭಅಲ್ಲಿಯೇ ನಿಂತಿದ್ದ ನಾಲ್ಕರಿಂದ ಐದು ಮಂದಿ ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭ ಪ್ರವೀಣ್ ಅವರ ಜೊತೆಯಲ್ಲಿದ್ದ ಪ್ರಜ್ವಲ್ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆ ಕುರಿತು ಪ್ರವೀಣ್‌ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಕಲಂ:115, 126(2), 352, 351(2),324 ಜೊತೆಗೆ 3 (5) ಬಿಎನ್‌ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!