Saturday, July 25, 2026
spot_imgspot_img
spot_imgspot_img

ಕೋಲಾರ: ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ

- Advertisement -
- Advertisement -

ಕೋಲಾರ: ಶಾಲೆಗೆಂದು ಹೋದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ನರಸಾಪುರ ಗ್ರಾಮದ ಶರಣ್ಯ ಹಾಗೂ ದೇವಿ ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಶಾಲೆಗೆಂದು ಹೋದ ಇಬ್ಬರು ವಿದ್ಯಾರ್ಥಿಗಳು ಇದುವರೆಗೂ ಪತ್ತೆಯಾಗಿಲ್ಲ. ಇತ್ತ ಶಾಲೆಗೂ ಹೋಗದೆ ಮನೆಗೂ ಬಾರದೆ ಕಣ್ಮರೆಯಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಇನ್ನೂ ಬೆಳಗ್ಗೆ ಶಾಲೆಗೆ ಹೋದವರು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಶುಕ್ರವಾರ ಇಡೀ ದಿನ ಮಕ್ಕಳಿಗಾಗಿ ಹುಡಕಾಟ ನಡೆಸಿದ್ದಾರೆ.

ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಮಕ್ಕಳನ್ನ ಹುಡುಕಿಕೊಡಿ ಎಂದು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹತ್ತನೇ ತರಗತಿ ಓದುತ್ತಿದ್ದು, ಎಲ್ಲಿಗೆ ಹೋಗಿದ್ದಾರೆ ಅನ್ನೋ ಮಾಹಿತಿ 24 ಗಂಟೆಯಾದರೂ ಇನ್ನೂ ಲಭ್ಯವಾಗಿಲ್ಲ. ಹೀಗಾಗಿ ಪೋಷಕರು ಹಾಗೂ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.

- Advertisement -

Related news

error: Content is protected !!